Download Our App

Follow us

Home » ರಾಜಕೀಯ » ಶಿಗ್ಗಾವಿ ಕಾಂಗ್ರೇಸ್ ಟಿಕೇಟಗಾಗಿ ಪೈಪೋಟಿ. ಬಣ ರಾಜಕೀಯದಲ್ಲಿ ಕಾಂಗ್ರೇಸ್ ಗೆ ಗೆಲ್ಲೋದು ಕಷ್ಟ, ಕಷ್ಟ.

ಶಿಗ್ಗಾವಿ ಕಾಂಗ್ರೇಸ್ ಟಿಕೇಟಗಾಗಿ ಪೈಪೋಟಿ. ಬಣ ರಾಜಕೀಯದಲ್ಲಿ ಕಾಂಗ್ರೇಸ್ ಗೆ ಗೆಲ್ಲೋದು ಕಷ್ಟ, ಕಷ್ಟ.

ಬಸವರಾಜ ಬೊಮ್ಮಾಯಿ ಲೋಕಸಭಾ ಸದಸ್ಯರಾದ ಬಳಿಕ ತೆರುವಾದ ಶಿಗ್ಗಾವ ಕ್ಷೇತ್ರಕ್ಕೆ 6 ತಿಂಗಳ ಒಳಗೆ ಉಪ ಚುನಾವಣೆ ನಡೆಯಲಿದೆ. 

ಶಿಗ್ಗಾವ ಕ್ಷೇತ್ರದ ಕಾಂಗ್ರೇಸ್ ಟಿಕೇಟಗಾಗಿ ಭಾರಿ ಪೈಪೋಟಿ ಕಾಣಿಸಿಕೊಂಡಿದೆ. 2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೇಸ್ಸಿನಿಂದ ಸ್ಪರ್ಧಿಸಿ ಪರಾಭವಗೊಂಡ ಯಾಸಿರಖಾನ ಪಠಾಣ ಮತ್ತೆ ಕಾಂಗ್ರೇಸ್ ಟಿಕೇಟಗಾಗಿ ಪ್ರಯತ್ನ ನಡೆಸಿದ್ದಾರೆ. 

ಮತ್ತೊಂದೆಡೆ ಮಾಜಿ ಶಾಸಕ ಅಜಂಪೀರ ಖಾದ್ರಿ, ಕಾಂಗ್ರೇಸ್ ಟಿಕೇಟ ಪಡೆಯಲು ಯತ್ನಿಸುತ್ತಿದ್ದಾರೆ. ಇಬ್ಬರು ಅಲ್ಪಸಂಖ್ಯಾತ ನಾಯಕರು ಎರಡು ಬಣಗಳಲ್ಲಿ ಗುರುತಿಸಿಕೊಂಡು ಟಿಕೇಟಗಾಗಿ ಪೈಪೋಟಿ ನಡೆಸಿದ್ದಾರೆ. 

ಈ ಇಬ್ಬರ ಮಧ್ಯೆ ಕುಂದಗೋಳದ ಮಾಜಿ ಶಾಸಕ ದಿವಂಗತ ಸಿ ಎಸ್ ಶಿವಳ್ಳಿಯವರ ಸಹೋದರ ಷಣ್ಮುಖ ಶಿವಳ್ಳಿ ಶಿಗ್ಗಾವ ಕ್ಷೇತ್ರದಲ್ಲಿಯೇ ಬೀಡು ಬಿಟ್ಟು, ಈ ಸಾರಿ ಕಾಂಗ್ರೇಸ್ ಟಿಕೇಟ ಪಡೆಯಬೇಕು ಎಂದು ಹಠ ತೊಟ್ಟಿದ್ದಾರೆ. ಅಲ್ಲದೆ ಮತ್ತೊರ್ವ ಕಾಂಗ್ರೇಸ್ ನಾಯಕ ಸೋಮಣ್ಣ ಬೇವಿನಮರದ, ಹುಬ್ಬಳ್ಳಿಯ ರಜತ್ ಉಳ್ಳಾಗಡ್ಡಿಮಠ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ ಸಹ ಶಿಗ್ಗಾವ ಕ್ಷೇತ್ರದ ಕಾಂಗ್ರೇಸ್ ಟಿಕೇಟ ಪಡೆಯಲು ಪ್ರಭಾವ ಬಳಸುತ್ತಿದ್ದಾರೆ. 

ಶಿಗ್ಗಾವ ಕಾಂಗ್ರೇಸ್ಸಿನಲ್ಲಿ ಟಿಕೇಟ ಪಡೆಯಲು ತೀವ್ರ ಪೈಪೋಟಿ ನಡೆದಿದ್ದು, ಬಣ ರಾಜಕೀಯ ಹೀಗೆ ಮುಂದುವರೆದರೆ, ಶಿಗ್ಗಾವ ಕ್ಷೇತ್ರದಲ್ಲಿ ಕಾಂಗ್ರೇಸ್ ಗೆಲ್ಲೋದು ಕಷ್ಟವಾಗಲಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!