Download Our App

Follow us

Home » ಕರ್ನಾಟಕ » ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತೆ ಆರಂಭ. ನಾಳೆ ಶಾಸಕ ವಿನಯ ಕುಲಕರ್ಣಿ ಮನೆಗೆ ಮುತ್ತಿಗೆ

ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತೆ ಆರಂಭ. ನಾಳೆ ಶಾಸಕ ವಿನಯ ಕುಲಕರ್ಣಿ ಮನೆಗೆ ಮುತ್ತಿಗೆ

ಕೂಡಲಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ನಡೆದಿರುವ ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತೆ ಆರಂಭಗೊಳ್ಳಲಿದೆ.

ನಾಳೆ 7 ನೇ ಹಂತದ ಹೋರಾಟಕ್ಕೆ ಕರೆ ನೀಡಿರುವ ಕೂಡಲಸಂಗಮ ಶ್ರೀಗಳು, ಶಾಸಕ ವಿನಯ ಕುಲಕರ್ಣಿಯವರ ಧಾರವಾಡದ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. 

ಬೆಳಗಾವಿಯಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಮೀಸಲಾತಿ ವಿಷಯ ಕುರಿತಂತೆ ನಿರ್ಧಾರ ತೆಗೆದುಕೊಳ್ಳುವದಾಗಿ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾತು ತಪ್ಪಿದ್ದಾರೆ ಎಂದು ಶ್ರೀಗಳು ಆರೋಪಿಸಿದ್ದಾರೆ. 

ನಾಳೆ ಮಧ್ಯಾನ್ಹ 12 ಘಂಟೆಗೆ ಧಾರವಾಡದ ಉಳವಿ ಚನ್ನಬಸವೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಲಿದ್ದು, ಅಲ್ಲಿಂದ ನೇರವಾಗಿ ವಿನಯ ಕುಲಕರ್ಣಿಯವರ ಮನೆಗೆ ತಲುಪಿ, ಮೀಸಲಾತಿಗಾಗಿ ಮುತ್ತಿಗೆ ಹಾಕಲಿದೆ. 

ಅಲ್ಲದೆ, ಪಂಚಮಸಾಲಿ ಶ್ರೀಗಳು, ಜುಲೈ 6 ರಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ಹಾಗೂ ಕುಂದಗೋಳ ಶಾಸಕ ಎಮ್ ಆರ್ ಪಾಟೀಲ ಮನೆಗೆ ಮುತ್ತಿಗೆ ಹಾಕಲಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!