ಇದೇ ತಿಂಗಳು 15 ರಿಂದ 26 ರ ವರೆಗೆ ವಿಧಾನ ಮಂಡಲದ ಅಧಿವೇಶನ ನಡೆಸಲು ಸರ್ಕಾರ ತೀರ್ಮಾನಿಸಿದೆ. 15 ರಂದು ಮುಂಜಾನೆ 11 ಘಂಟೆಗೆ ವಿಧಾನಸಭೆ ಸಭಾಂಗಣದಲ್ಲಿ ಸಭೆ ಸೇರಲಿದ್ದು, ಅಂದು ಕಲಾಪ ಆರಂಭವಾಗಲಿದೆ.
ವಿರೋದ ಪಕ್ಷ ಬಿಜೆಪಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಎಲ್ಲ ತಯಾರಿ ನಡೆಸಿದ್ದು, ವಿಪಕ್ಷ ಎದುರಿಸಲು ಸಿದ್ದರಾಮಯ್ಯ ಸರ್ಕಾರ ಸಜ್ಜುಗೊಂಡಿದೆ.
ಮುಡಾ ಹಗರಣ, ವಾಲ್ಮೀಕಿ ನಿಗಮದ ಅವ್ಯವಹಾರ ಪ್ರಕರಣ, ಪೆಟ್ರೋಲ್, ಡೀಸೆಲ್ ತೆರಿಗೆ ಏರಿಕೆ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೆ ಖೆಡ್ದಾ ತೋಡಲಿದ್ದಾರೆ.
Author: Karnataka Files
Post Views: 2





