ಶಾಲೆಗಳು ಆರಂಭಗೊಂಡಿದ್ದು, ಮಕ್ಕಳನ್ನು ಶಾಲೆಗೆ ಕಳಿಸಲು ಪಾಲಕರು ಶಾಲಾ ವಾಹನದ ಮೋರೆ ಹೋಗಿದ್ದಾರೆ. ಅಟೋರಿಕ್ಷಾ, ಮಾರುತಿ ವ್ಯಾನ್ ಗಳು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದು, ಹುಬ್ಬಳ್ಳಿ ಧಾರವಾಡದಲ್ಲಿ ಸಂಚಾರಿ ಪೊಲೀಸರು ಅಂತಹ ಶಾಲಾ ವಾಹನಗಳ ಸುರಕ್ಷತೆಯ ಬಗ್ಗೆ ತಪಾಸಣೆ ನಡೆಸಬೇಕಿದೆ.
ಇತ್ತೀಚೆಗೆ ಬೆಂಗಳೂರು ಸಂಚಾರಿ ಪೊಲೀಸರು ವಿಶೇಷ ಅಭಿಯಾನ ನಡೆಸಿದ್ದು, 3016 ಶಾಲಾ ಬಸ್ ಚಾಲಕರ ಪೈಕಿ 23 ಮಂದಿ ಮದ್ಯಪಾನ ಮಾಡಿದ್ದನ್ನು ಪತ್ತೆ ಹಚ್ಚಿದ್ದಾರೆ
ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ 23 ಚಾಲಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಧಾಖಲು ಮಾಡಿದ್ದಾರೆ. ಅಲ್ಲದೆ ವಾಹನ ಪರವಾನಿಗೆ ರದ್ದು ಮಾಡಲಾಗಿದೆ.
ಹುಬ್ಬಳ್ಳಿ ಧಾರವಾಡದಲ್ಲಿ ಸಾವಿರಾರು ಶಾಲೆಗಳಿದ್ದು, ಪಾಲಕರು ಮಕ್ಕಳನ್ನು ವಾಹನದಲ್ಲಿ ಕಳಿಸುವದಕ್ಕೂ ಮುನ್ನ ವಾಹನದ ಸುರಕ್ಷತೆ ಹಾಗೂ ಚಾಲಕರ ಬಗ್ಗೆ ಮಾಹಿತಿ ಕಲೆಹಾಕಬೇಕಿದೆ
Author: Karnataka Files
Post Views: 2





