ಧಾರವಾಡದಲ್ಲಿರುವ ವೀರಶೈವ ಮಹಾಸಭಾ ಪದಾಧಿಕಾರಿಗಳ ಚುನಾವಣೆಗೆ ಮತದಾನ ತುರುಸಿನಿಂದ ಕೂಡಿದೆ. ಇಷ್ಟು ವರ್ಷ ವೀರಶೈವ ಮಹಾಸಭೆಗೆ ಅವಿರೋಧ ಆಯ್ಕೆ ನಡೆಯುತ್ತಿತ್ತು. ಈ ಸಲ ಚುನಾವಣೆ ನಡೆದಿದೆ.
ಅಧ್ಯಕ್ಷ ಸ್ಥಾನಕ್ಕೆ ಪ್ರದೀಪ ಪಾಟೀಲ, ಗುರುರಾಜ ಹುಣಸಿಮರದ, ಸಿದ್ದು ಕಂಬಾರ ಸ್ಪರ್ಧೆ ಮಾಡಿದ್ದು, ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.
ವೀರಶೈವ ಮಹಾಸಭೆಯಲ್ಲಿ 2850 ಜನ ಮತದಾನದ ಹಕ್ಕು ಹೊಂದಿದ್ದು, ಸಂಜೆ 5 ರ ವರೆಗೆ ಮತದಾನ ನಡೆಯಲಿದೆ. 6 ಘಂಟೆಯ ನಂತರ ಮತ ಏಣಿಕೆ ನಡೆಯಲಿದೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಪ್ರದೀಪ ಪಾಟೀಲರಿಗೆ ಶಾಸಕ ವಿನಯ ಕುಲಕರ್ಣಿ ಹಾಗೂ ಅರವಿಂದ ಬೆಲ್ಲದ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ ಅಧ್ಯಕ್ಷರಾಗಿದ್ದ ಗುರುರಾಜ ಹುಣಸಿಮರದ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದು ತೀವ್ರ ಪೈಪೋಟಿ ನೀಡಿದ್ದಾರೆ. ಸಿದ್ದು ಕಂಬಾರ ಅವರಿಗೆ ಸಮಾನ ಮನಸ್ಕರು ಬೆಂಬಲ ನೀಡಿದ್ದು, ತಿಕ್ರೋಣ ಸ್ಪರ್ಧೆ ಏರ್ಪಟ್ಟಿದೆ.
Author: Karnataka Files
Post Views: 6





