Download Our App

Follow us

Home » ಕರ್ನಾಟಕ » 15 ರಂದು ರವಿವಾರ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ. 2500 ಕಿಲೋಮೀಟರ್ ಮಾನವ ಸರಪಳಿ

15 ರಂದು ರವಿವಾರ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ. 2500 ಕಿಲೋಮೀಟರ್ ಮಾನವ ಸರಪಳಿ

ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಜೀವಾಳವಾದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಕರ್ನಾಟಕ ಸಾಕ್ಷಿಯಾಗುತ್ತಿದೆ. 

ಇದೇ ಸೆಪ್ಟೆಂಬರ್ 15 ರಂದು ರವಿವಾರ ಬೀದರನಿಂದ ಚಾಮರಾಜನಗರದ ವರೆಗೆ ಒಟ್ಟು 2500 ಕಿಲೋಮೀಟರ್ ನಷ್ಟು ಮಾನವ ಸರಪಳಿ ನಿರ್ಮಿಸಲು ಭರದ ಸಿದ್ಧತೆ ನಡೆದಿದೆ. 

31 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಈ ಮಾನವ ಸರಪಳಿಯಲ್ಲಿ 25 ಲಕ್ಷ ಜನ ಭಾಗವಹಿಸಲಿದ್ದಾರೆ. ಅಲ್ಲದೇ ಈ ಐತಿಹಾಸಿಕ ಕಾರ್ಯಕ್ರಮದ ನೆನಪಿಗಾಗಿ 10 ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ. 5 ಸಾವಿರ ಜನ ಸಂವಿಧಾನದ ಪೀಠಿಕೆಗಳನ್ನು ಕೈಯಲ್ಲಿ ಹಿಡಿದು ವಿಶ್ವ ಧಾಖಲೆ ಬರೆಯಲಿದ್ದಾರೆ. 

ಪ್ರಜಾಪ್ರಭುತ್ವವೇ ಉತ್ತಮ ಆಡಳಿತ ಎಂದು ನಂಬಿರುವ ನಾವೆಲ್ಲರೂ ಇದೇ ಸೆ.15ರಂದು ಬೆಳಗ್ಗೆ 9.30ಕ್ಕೆ ಬೀದರ್‌ನಿಂದ ಚಾಮರಾಜನಗರದವರೆಗೆ ನಡೆಯಲಿರುವ 2,500 ಕಿಮೀ ಉದ್ದದ ಮಾನವ ಸರಪಳಿಯಲ್ಲಿ ಪಾಲ್ಗೊಳ್ಳೋಣ.

ದಯವಿಟ್ಟು ಈ ಉದಾತ್ತ ಉದ್ದೇಶಕ್ಕಾಗಿ ಭಾನುವಾರ ಬೆಳಿಗ್ಗೆ ನಿಮ್ಮ ಅಮೂಲ್ಯ ಸಮಯವನ್ನು ನೀಡುವಂತೆ ಹಿರಿಯ ಐ ಎ ಎಸ್ ಅಧಿಕಾರಿ ಪಿ ಮನಿವಣ್ಣನ ಅವರು ಮನವಿ ಮಾಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡೆಮಿ ನೂತನ ಅಧ್ಯಕ್ಷರಾಗಿ ಅಡಿವೇಶ್ ಇಟಗಿ ನೇಮಕ

ಧಾರವಾಡದಲ್ಲಿರುವ ಬಾಲ ವಿಕಾಸ ಅಕಾಡೆಮಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.  ನೂತನ ಅಧ್ಯಕ್ಷರಾಗಿ ಪಂಚಮಸಾಲಿ ಸಮಾಜದ ಹಿರಿಯರಾದ ಅಡಿವೇಶ್ ಇಟಗಿಯವರನ್ನು ನೇಮಕ ಮಾಡಲಾಗಿದೆ.       

Live Cricket

error: Content is protected !!