ಅಣ್ಣಿಗೇರಿಯ ಉಗ್ರಾಣದಲ್ಲಿ ನಡೆದ ಕಡ್ಲಿ ಹಾಗೂ ಹೆಸರು ಕಳ್ಳತನ ಪ್ರಕರಣದ ಒಂದಿಷ್ಟು ಸ್ಪೋಟಕ ಮಾಹಿತಿ ಕರ್ನಾಟಕ ಫೈಲ್ಸ್ ಗೆ ಲಭ್ಯವಾಗಿವೆ.
ಉಗ್ರಾಣದ ಮ್ಯಾನೇಜರ, ಕಡಲೆ ಹಾಗೂ ಹೆಸರನ್ನು ಗದಗಗೆ ರವಾನೆ ಮಾಡಿರುವದಾಗಿ ಬಾಯಿಬಿಟ್ಟಿದ್ದಾನೆ.
ಅಣ್ಣಿಗೇರಿಯ ಉಗ್ರಾಣದಲ್ಲಿದ್ದ 1100 ಚೀಲ ಕಡಲೆ ಗದುಗಿನ ಗುರುರಾಜ ಹಾಗೂ ಶಿದ್ಲಿಂಗ ಎಂಬುವವರಿಗೆ ಮಾರಾಟ ಮಾಡಿರುವದಾಗಿ ತಿಳಿದು ಬಂದಿದೆ.
ಗುರುರಾಜ ಹಾಗೂ ಶಿದ್ಲಿಂಗ ಎಂಬುವವರಿಗೆ ಶಂಬು ಅನ್ನುವ ಮಧ್ಯವರ್ತಿ ಮಾರಾಟ ಮಾಡಿಸಿರುವದು ಬೆಳಕಿಗೆ ಬಂದಿದೆ.
ರೈತರ ಮಾಲು ಎಂದು ಖರೀದಿ ಮಾಡಿರುವದಾಗಿ ಶಿದ್ಲಿಂಗ ಹಾಗೂ ಗುರುರಾಜ ಟ್ರೇಡರ್ಸ್ ಮಾಲೀಕರು ಹೇಳಿದ್ದು, ಯಾರ ವಾಹನದಲ್ಲಿ ಕಳ್ಳತನವಾದ ಕಡಲೆ ರವಾನೆ ಮಾಡಲಾಗಿತ್ತು ಅನ್ನೋದು ಬಹಿರಂಗವಾಗಬೇಕಾಗಿದೆ.
Author: Karnataka Files
Post Views: 2





