Download Our App

Follow us

Home » ಭಾರತ » ನಟಿ ಉರ್ಮಿಳಾ ಕಾರು ಅಪಘಾತ. ಓರ್ವನ ಸಾವು

ನಟಿ ಉರ್ಮಿಳಾ ಕಾರು ಅಪಘಾತ. ಓರ್ವನ ಸಾವು

ನಟಿ ಊರ್ಮಿಳಾ ಕೊಠಾರೆ ಅವರ ಕಾರು ಅಪಘಾತದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. 

ಮುಂಬೈನ ಕಾಂಡಿವಲಿ ಪ್ರದೇಶದ ಪೊಯಿಸರ್ ಮೆಟ್ರೋ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಶುಕ್ರವಾರ ನಡೆದ ಈ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಊರ್ಮಿಳಾ ಕೊಠಾರೆ ಚಿತ್ರೀಕರಣ ಮುಗಿಸಿ ಮನೆಗೆ ಮರಳುತ್ತಿದ್ದಾಗ ಅವರ ಕಾರು ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿ, ಅಪಘಾತ ಸಂಭವಿಸಿದೆ. 

ಕಾರು ಇಬ್ಬರು ಕಾರ್ಮಿಕರಿಗೆ ಢಿಕ್ಕಿ ಹೊಡೆದಿದ್ದು, ಒಬ್ಬರು ಮೃತಪಟ್ಟು ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ ಊರ್ಮಿಳಾ ಮತ್ತು ಆಕೆಯ ಚಾಲಕ ಕೂಡ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಉರ್ಮಿಳಾ ಮರಾಠಿ ಚಿತ್ರರಂಗದ ಬೇಡಿಕೆಯ ನಟಿಯಾಗಿದ್ದಾಳೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ಇಬ್ಬರು ಸುಲಿಗೆಕೋರರ ಬಂಧನ

ಹುಬ್ಬಳ್ಳಿಯ ದೇವರಗುಡಿಹಾಳದಿಂದ ರೇವಡಿಹಾಳಕ್ಕೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಕುಳಿತಿದ್ದ ದಂಪತಿಗಳನ್ನು ಕೆಳಗೆ ಇಳಿಸಿ ಬಂಗಾರದ ಆಭರಣ ದೋಚಿದ್ದ ಇಬ್ಬರು ಸುಲಿಗೆಕೋರರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹೆಡೆಮುರಿಗೆ ಕಟ್ಟಿದ್ದಾರೆ.

Live Cricket

error: Content is protected !!