ಸರ್ವಧರ್ಮ ವೇದಿಕೆ ಹಾಗೂ ವಿನೋದ ಅಸೂಟಿ ಅಭಿಮಾನಿಗಳ ಬಳಗದಿಂದ ಫೆಬ್ರವರಿ 1 ರಂದು ನವಲಗುಂದದಲ್ಲಿ ಟಗರಿನ ಕಾಳಗ ಏರ್ಪಡಿಸಲಾಗಿದೆ.
ನವಲಗುಂದ ಹತ್ತಿರ ಇರುವ ಕುಮಾರಗೊಪ್ಪ ಕ್ರಾಸ್ ಬಳಿ ಸಂಜೆ 4-30 ಕ್ಕೆ ಟಗರಿನ ಕಾಳಗ ಆರಂಭವಾಗಲಿದೆ.
ರಾಜ್ಯ ಮಟ್ಟದ ಟಗರಿನ ಕಾಳಗ ಇದಾಗಿದ್ದು, ಈಗಾಗಲೇ ನೂರಕ್ಕೂ ಹೆಚ್ಚು ಟಗರಿನ ಮಾಲೀಕರು ಹೆಸರನ್ನು ನೊಂದಾಯಿಸಿದ್ದಾರೆ.
ಈಗಾಗಲೇ ವಿನೋದ ಅಸೂಟಿ ಅಭಿಮಾನಿಗಳ ಬಳಗದಿಂದ 500 ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ನೀಡಿದ್ದು, ವಿನೋದ ಅಸೂಟಿ ಅಭಿಮಾನಿಗಳ ಬಳಗ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿದೆ.
Author: Karnataka Files
Post Views: 2





