ಹುಬ್ಬಳ್ಳಿಯಲ್ಲಿ ನಿನ್ನೇ ತಡರಾತ್ರಿ ಕೊಲೆ ನಡೆದ ಬೆನ್ನಲ್ಲೇ, ಧಾರವಾಡದಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ.
ಶಹರ ಠಾಣೆ ಪೊಲೀಸ್ ಸಿಬ್ಬಂದಿ ಠಾಣಾ ವ್ಯಾಪ್ತಿಯಲ್ಲಿ ಬೈಕ್ ನಲ್ಲಿ ಸಂಚರಿಸಿ, ಪುಂಡ ಪೋಕರಿಗಳಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
ಕುಡಿದು ವಾಹನ ಚಲಾಯಿಸುವವರು, ಸಾರ್ವಜನಿಕರಿಗೆ ಕಿರಿಕಿರಿ ಕೊಡುವವರ ಮೇಲೆ ತಕ್ಕ ಕ್ರಮ ಕೈಗೊಳ್ಳುತ್ತಿದ್ದಾರೆ.
ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯುವವರನ್ನು ಮನೆಗೆ ಕಳಿಸುತ್ತಿರುವ ಪೊಲೀಸರು, ಬೈಕ್ ನಲ್ಲಿ ಪ್ರತಿ ಗಲ್ಲಿ ಗಲ್ಲಿಯಲ್ಲಿ ಸಂಚರಿಸುತ್ತಿದ್ದಾರೆ.
Author: Karnataka Files
Post Views: 2





