ಧಾರವಾಡದ ರಜತಗಿರಿಯಲ್ಲಿ ಮನೆ ಮನೆಗೆ ಸಂಪರ್ಕ ಕಲ್ಪಿಸುವ ಗ್ಯಾಸ್ ಪೈಪ್ ಲೈನ್ ಸೋರಿಕೆಯಿಂದಾಗಿ ಕಾಣಿಸಿಕೊಂಡ ಬೆಂಕಿ, ಸಾವಿರಾರು ಮನೆಗಳ ಒಲೆಗಳನ್ನು ಬಂದ್ ಮಾಡಿದಂತಾಗಿದೆ.
ಗ್ಯಾಸ್ ಪೈಪ್ ಲೈನ್ ಸೋರಿಕೆಯಿಂದ ಇಂದು ಬೆಳಿಗ್ಗೆ ರಜತಗಿರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಘಟನೆ ನಡೆದ ಬೆನ್ನಲ್ಲೇ ಗ್ಯಾಸ್ ಸರಬರಾಜು ಬಂದ್ ಮಾಡಲಾಗಿತ್ತು.
ಮಧ್ಯಾಹ್ನದ ಅಡುಗೆ, ರಾತ್ರಿ ಅಡುಗೆ ಮಾಡಲು ಗ್ಯಾಸ್ ಸಂಪರ್ಕ ಇಲ್ಲದೆ ಮನೆಯ ಹೆಣ್ಣಕ್ಕಳು ಕಂಗಾಲಾಗಿದ್ದಾರೆ.
ವಿದ್ಯಾಗಿರಿ, ರಜತಗಿರಿ, ಮಾಳಮಡ್ಡಿ, ಗಾಂಧಿನಗರ, ಯಾಲಕ್ಕಿ ಶೆಟ್ಟರ ಕಾಲನಿ, ನವಲೂರು ಬಡಾವಣೆ, ಸತ್ತೂರು ಬಡಾವಣೆ ಸೇರಿದಂತೆ ಅನೇಕ ನಗರಗಳಲ್ಲಿ ಇವತ್ತು ಮಧ್ಯಾಹ್ನದಿಂದ ಮನೆಯಲ್ಲಿನ ಒಲೆಗಳೇ ಹತ್ತಿಲ್ಲ.
ಗ್ಯಾಸ್ ಸಂಪರ್ಕ ಸರಿ ಮಾಡುವವರೆಗೆ, ಅವರು ಒಲೆ ಹಚ್ಚುವ ಹಾಗಿಲ್ಲ. ಅನೇಕ ಜನ ಹೋಟೆಲ್ ಗಳಿಂದ ಆಹಾರ ತರಿಸಿಕೊಂಡು ಕಾಲ ಕಳೆಯುತ್ತಿದ್ದಾರೆ.
Author: Karnataka Files
Post Views: 2





