ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಕೈಗೊಂಡಿರುವ ಅತ್ಯಂತ ಮಹತ್ವದ ಸಾಹಸಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.
ಚಂದ್ರಯಾನ 3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಲೆಂದು ಬಳ್ಳಾರಿಯ ವಾಸವಿ ಶಾಲೆಯಲ್ಲಿ ಮಕ್ಕಳು ಹಾಗೂ ಶಿಕ್ಷಕರು ವಿಶೇಷ ಪೂಜೆ ಸಲ್ಲಿಸಿದರು.
ಚಂದ್ರಯಾನ ಯಶಸ್ಸಿಗೆ ಭಾರತದ ಧ್ವಜ ಹಿಡಿದು ಪ್ರಾರ್ಥನೆ ಮಾಡಿದ ವಿದ್ಯಾರ್ಥಿಗಳು ರಾಕೆಟ್ ಮಾದರಿಯ ಸ್ಥಬ್ಧ ಚಿತ್ರ ನಿರ್ಮಾಣ ಮಾಡಿ ಶುಭ ಹಾರೈಸಿದರು. ಮಕ್ಕಳು ಇಸ್ರೊ ವಿಜ್ಞಾನಿಗಳು, ಭಾರತ ಮಾತೆಗೆ ಜಯಕಾರ ಹಾಕಿ ಶುಭ ಕೋರಿದರು. ಜೈ ಇಸ್ರೋ , ಜೈ ಭಾರತ್ ಎಂದು ಮಕ್ಕಳು ಘೋಷಣೆ ಕೂಗಿದರು…
Author: Karnataka Files
Post Views: 1





