Download Our App

Follow us

Home » ಭಾರತ » ಪಟಾಕಿ ಗೋದಾಮನಲ್ಲಿ ಅಗ್ನಿ ಅವಘಡ. ಮೂವರ ಸಜೀವ ದಹನ, ಇನ್ನು ಐವರಿಗೆ ಹುಡುಕಾಟ

ಪಟಾಕಿ ಗೋದಾಮನಲ್ಲಿ ಅಗ್ನಿ ಅವಘಡ. ಮೂವರ ಸಜೀವ ದಹನ, ಇನ್ನು ಐವರಿಗೆ ಹುಡುಕಾಟ

ಹಾವೇರಿ ಬಳಿ ಇರುವ ಆಲದಕಟ್ಟಿ ಗ್ರಾಮದಲ್ಲಿ ಪಟಾಕಿ ಗೋದಾಮಗೆ ಬೆಂಕಿ ಬಿದ್ದ ಪರಿಣಾಮ ಮೂವರು ಕಾರ್ಮಿಕರು ದುರ್ಮರಣ ಹೊಂದಿದ್ದಾರೆ.

ಮೂವರ ಮೃತದೇಹ ಸುಟ್ಟು ಕರಕಲಾಗಿದ್ದು, ಮೃತರನ್ನು ದ್ಯಾಮಪ್ಪ ಓಲೇಕಾರ್, ರಮೇಶ ಬಾರ್ಕಿ, ಶಿವಲಿಂಗ ಅಕ್ಕಿ ಎಂದು ಗುರುತಿಸಲಾಗಿದೆ. ಇನ್ನು ಐವರು ಕಾರ್ಮಿಕರು ಒಳಗೆ ಇದ್ದರು ಎಂದು ಮಾಹಿತಿ ಸಿಕ್ಕಿದ್ದು, ನಾಪತ್ತೆಯಾದವರ ಶೋಧ ಕಾರ್ಯ ನಡೆದಿದೆ ಎಂದು ಎಸ್ ಪಿ ಶಿವಕುಮಾರ ಗುಣಾರ ತಿಳಿಸಿದ್ದಾರೆ. ಸ್ಥಳದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಗಣೇಶ ಹಬ್ಬಕ್ಕೆಂದು ಪಟಾಕಿ ತಂದು ಗೋದಾಮನಲ್ಲಿ ಶೇಖರಿಸಿ ಇಡಲಾಗಿತ್ತು ಎನ್ನಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನೆ ಇನ್ ಸೈಡ್ ಸ್ಟೋರಿ. ಓದಲೇಬೇಕಾದ ಸ್ಟೋರಿ.

ಪೊಲೀಸ್ ಪೇದೆ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಧಾರವಾಡದಲ್ಲಿ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಧಾರವಾಡ ಚಲೋ ಬೃಹತ್ ಪ್ರತಿಭಟನೆ ನಡೆಯಲಿದೆ. ಧಾರವಾಡ ವಿದ್ಯಾಕಾಶಿ ಎಂದು

Live Cricket

error: Content is protected !!