ಹಾವೇರಿ ಬಳಿ ಆಲದಕಟ್ಟಿ ಗ್ರಾಮದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಸಿ ಜೆ ವಿರೇಶ ಎಂಬುವವರಿಗೆ ಸೇರಿದ ಗೋಡೌನ್ ಗೆ ಬೆಂಕಿ ಬಿದ್ದಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ ಸಿಡಿ ಮದ್ದುಗಳನ್ನು ಶೇಖರಿಸಿಡಲಾಗಿತ್ತು ಎನ್ನಲಾಗಿದೆ. ವೆಲ್ಡಿಂಗ್ ಮಾಡುವ ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಅಲ್ಲಿ ಕೆಲಸ ಮಾಡುತ್ತಿದ್ದ 6 ಜನ ಕಾರ್ಮಿಕರು ಅದೃಷ್ಟಾವಶಾತ್ ಪಾರಾಗಿದ್ದಾರೆ. ಗಣಪತಿ ಹಬ್ಬಕ್ಕೆಂದು ಶಿವಕಾಶಿ ಇಂದ ಪಟಾಕಿಗಳನ್ನು ತಂದಿದ್ದರು ಎನ್ನಲಾಗಿದೆ. ಮುಗಿಲೆತ್ತರಕ್ಕೆ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಿಯಂತ್ರಣಕ್ಕೆ ತಂದಿದ್ದಾರೆ.
Author: Karnataka Files
Post Views: 1





