Download Our App

Follow us

Home » ರಾಜಕೀಯ » ಸೈಲೆಂಟ್ ಶೆಟ್ಟರು ವೈಲೆಂಟ್ ಆಗಿದ್ದು ಯಾಕೆ. ಹೊರಬಿತ್ತು ಸಂಕಲ್ಪ! ಲಿಂಗಾಯತ ಪಾಲಿಟಿಕ್ಸ್

ಸೈಲೆಂಟ್ ಶೆಟ್ಟರು ವೈಲೆಂಟ್ ಆಗಿದ್ದು ಯಾಕೆ. ಹೊರಬಿತ್ತು ಸಂಕಲ್ಪ! ಲಿಂಗಾಯತ ಪಾಲಿಟಿಕ್ಸ್

ಮಾತು ಕಡಿಮೆ ಕೆಲಸ ಜಾಸ್ತಿ, ತೀರಾ ಸಭ್ಯ ರಾಜಕಾರಣಿ ಎಂಬೆಲ್ಲ ಹೆಸರು ಮಾಡಿದ್ದಾರೆ, ಜಗಶ ಶೆಟ್ಟರ, ಇದೀಗ ಫುಲ್ ಆಕ್ಟಿವ್ ಆಗಿದ್ದಾರೆ. ಸೈಲೆಂಟ್ ಶೆಟ್ಟರ ವೈಲೆಂಟ್ ಆಗಲು ಆ ವ್ಯಕ್ತಿ………….ಕಾರಣ ಅನ್ನೋದು ರಾಜಕೀಯ ಅಂಗಳದಲ್ಲಿ ಕೇಳಿ ಬರುತ್ತಿರುವ ಮಾತು.

ಜನಸಂಘದಲ್ಲಿ (RSS) ಸಕ್ರಿಯರಾಗಿದ್ದ  ಜಗದೀಶ ಶೆಟ್ಟರ, ಕಟ್ಟರ ಆರ್ ಎಸ್ ಎಸ್ ನವರು. ಯಡಿಯೂರಪ್ಪ ಮತ್ತು ಅನಂತಕುಮಾರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಹುಬ್ಬಳ್ಳಿಯ ಇದ್ಗಾ ಮೈದಾನದ ಹೋರಾಟ ಶೆಟ್ಟರ ಅವರಿಗೆ  ದೊಡ್ಡ ಹೆಸರು ತಂದು ಕೊಟ್ಟಿತು. ಈದ್ಗಾ ಹೋರಾಟ,  ಶೆಟ್ಟರ ಅವರಿಗೆ ಅಧಿಕಾರವು ತಂದು ಕೊಟ್ಟಿತು. ಆರ್ ಎಸ್ ಎಸ್ ಗರಡಿ ಮನೆಯಲ್ಲಿ ತಯಾರಾಗಿದ್ದ  ಜಗದೀಶ ಶೆಟ್ಟರಗೆ, ಆರ್ ಎಸ್ ಎಸ್ ಎಂಬ ಗರಡಿ ಮನೆಯೇ ಬಾಗಿಲು ಮುಚ್ಚಿದ್ದು ಇತಿಹಾಸ. 

ಭಾರತೀಯ ಜನತಾ ಪಕ್ಷದ ನಾನಾ ಹುದ್ದೆಗಳನ್ನು ಅಲಂಕರಿಸಿದ ಆರ್ ಎಸ್ ಎಸ್ ಕಟ್ಟರ್, ಜಗದೀಶ ಶೆಟ್ಟರ್ ಅವರಿಗೆ 2023 ರ ವಿಧಾನ ಸಭೆ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಲಾಯಿತು. ಯಾವಾಗ ಪಕ್ಷದ ಹೈಕಮಾಂಡ ಟಿಕೆಟ್ ಕೊಡಲು ನಿರಾಕರಿಸಿದರೋ, “ಸೈಲೆಂಟ್ ಆಗಿದ್ದ ಶೆಟ್ಟರ ವೈಲೆಂಟ್ ” ಆದರು.

ಟಿಕೆಟ್ ಕೈ ತಪ್ಪಲು ಬಿಜೆಪಿಯ ರಾಷ್ಟ್ರೀಯ ಸಂಘದ ಕಾರ್ಯದರ್ಶಿ ಬಿ ಎಲ್ ಸಂತೋಷ ಕಾರಣ ಎಂದು ನೇರ ಆರೋಪ ಕೇಳಿ ಬಂತು. ಟಿಕೆಟ್ ಕೊಡದೆ ಹೋದರು, ಶೆಟ್ಟರ ಅವರು,  ಸಂಭಾವಿತ ರಾಜಕಾರಣಿ, ಸುಮ್ಮನೆ ಪಕ್ಷದಲ್ಲಿ ಇರ್ತಾರೆ ಅಂತಾ ಬಿ ಎಲ್ ಗ್ಯಾಂಗ್ ಭಾವಿಸಿತ್ತು. ಬಿಜೆಪಿ ನಡೆಸಿಕೊಂಡ ಬಗ್ಗೆ ನೋವು ಹೊರಗೆ ಹಾಕಿದ್ದ ಶೆಟ್ಟರ, ಬಿ ಎಲ್ ಸಂತೋಷ ಗ್ಯಾಂಗ ಮೇಲೆ ಸಮರ ಸಾರಿದ್ದರು. ಟಿಕೆಟ್ ತಪ್ಪಿಸಿದ್ದರ ಹಿಂದೆ ಪ್ರಲ್ಲಾದ ಜೋಶಿ ಕೈವಾಡ ಸಹ ಇದೆ ಎಂದು ಶೆಟ್ಟರ ಆಪ್ತರ ಬಳಿ ಹೇಳಿದ್ದರು.

ಟಿಕೆಟ್ ಕೈ ತಪ್ಪಿದ ಮರುದಿನ ಬಿಜೆಪಿಗೆ  ಮಾಸ್ಟರ್ ಸ್ಟ್ರೋಕ್ ಕೊಟ್ಟ ಶೆಟ್ಟರ, ಲಿಂಗಾಯತ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಶುರುವಿಟ್ಟುಕೊಂಡರು. ಶೆಟ್ಟರ ಹೇಳಿದಂತೆಯೇ ಅಥಣಿಯಲ್ಲಿ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಲಕ್ಷ್ಮಣ ಸವದಿಗೆ ಟಿಕೆಟ್ ನಿರಾಕರಿಸಲಾಯಿತು.

ಇಬ್ಬರು ಘಟಾನುಘಟಿ ನಾಯಕರು ಬಿಜೆಪಿ ವಿರುದ್ಧ ಯಾವಾಗ ಸಿಡಿದೆದ್ದರೋ, ಬಿಜೆಪಿ ಸೋಲಿಸಲು ಶಪಥ ಮಾಡಲಾರಂಭಿಸಿದರು. ಆಡಿದ್ದನ್ನು ಮಾಡಿಯೇ ತೋರಿಸಿದರು.

ಈಗ ಶೆಟ್ಟರ ಮಾಡಿದ ಶಪಥ ಯಾವದು ? ಕೈ ಹಿಡಿದ ಸಂಕಲ್ಪ ಎಂತದ್ದು.

ಸುಧೀರ್ಘ ಅವಧಿಗೆ ಬಿಜೆಪಿ ಕಟ್ಟಿ ಬೆಳೆಸಿದ್ದ ಜಗದೀಶ ಶೆಟ್ಟರ, ಎಂತಹ ಸಂದರ್ಭದಲ್ಲಿಯೂ ಸಹ, ಬಿಜೆಪಿ ಬಿಟ್ಟು ದೂರ ಸರಿದವರಲ್ಲ. ಈಗ ಅದೇ ಶೆಟ್ಟರ ಬಿಜೆಪಿ ಸೋಲಿಸಲು ಶಪಥದ ಜೊತೆ ಸಂಕಲ್ಪ ಮಾಡಿದ್ದಾರೆ.

2024 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಶತಾಯ ಗತಾಯ ಬಿಜೆಪಿಯನ್ನು ಸೋಲಿಸಲು ಶೆಟ್ಟರ್ ಶಪಥವನ್ನು ಮಾಡಿದ್ದು, ಧಾರವಾಡ ಲೋಕಸಭಾ ಕ್ಷೇತ್ರ ಸೇರಿದಂತೆ 15 ರಿಂದ 20 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಶೆಟ್ಟರ ಹೇಳಿದ್ದಾರೆ. ಬಿ ಎಲ್ ಸಂತೋಷ ಜೊತೆ ಹಾಲಿ ಸಂಸದ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೋಲಿಸಲು ಸಂಕಲ್ಪ ಮಾಡಿದ್ದಾರೆ. ಪುತ್ರ ಸಂಕಲ್ಪ ಶೆಟ್ಟರ, ಇವತ್ತು ತಂದೆಯ ಜೊತೆ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಿ ಎಲ್ ಸಂತೋಷಗೆ ಟಕ್ಕರ ಕೊಟ್ಟಿದ್ದಾರೆ.

ಹಿರಿಯ ಸಹೋದರ, ಜಗದೀಶ ಶೆಟ್ಟರ ಬಿಜೆಪಿ ತೊರೆದು ಕಾಂಗ್ರೇಸ್ ಸೇರಿದ ಮೇಲೆ ಎಮ್ ಎಲ್ ಸಿ, ಪ್ರದೀಪ ಶೆಟ್ಟರರನ್ನು ಪಕ್ಷದ ಕಾರ್ಯಕ್ರಮಗಳಿಂದ ದೂರ ಇಡಲಾಯಿತು. ಈಗ ಅಣ್ಣನ ಹಾದಿ ತುಳಿದಿರುವ ಪ್ರದೀಪ ಶೆಟ್ಟರ ಲಿಂಗಾಯತ ಟ್ರಂಪ್ ಕಾರ್ಡ ಇಟ್ಟುಕೊಂಡು ಬಿಜೆಪಿ ವಿರುದ್ಧ ಸಿಡಿದೆದ್ದಿದ್ದಾರೆ.

ನಿನ್ನೇ ಪ್ರದೀಪ ಶೆಟ್ಟರ ಇವತ್ತು ಜಗದೀಶ ಶೆಟ್ಟರ ಪುತ್ರ ಸಂಕಲ್ಪ ಶೆಟ್ಟರ ಎಂಟ್ರಿ ಕೊಟ್ಟಿದ್ದು, ಬಿ ಎಲ್ ಸಂತೋಷ ಗ್ಯಾಂಗಗೆ ಟಕ್ಕರ ಕೊಡಲು ಸಜ್ಜಾಗಿದ್ದಾರೆ.

ನವಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಧಾರವಾಡ, ಬೆಳಗಾವಿ, ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ರಾಜಕಾರಣ ದೊಡ್ಡ ಸದ್ದು ಮಾಡಲಿದೆ, ಅದಕ್ಕಾಗಿ ಶಪಥ ಮತ್ತು ಸಂಕಲ್ಪ ಎರಡು ಮಾಡಲಾಗಿದೆ.

ನವಲಗುಂದ ಮಾಜಿ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ, ಕುಂದಗೋಳದ ಎಸ್ ಐ ಚಿಕ್ಕನಗೌಡರ, ಶಿರಹಟ್ಟಿಯ ರಾಮಣ್ಣ ಲಮಾಣಿ, ರಾಮದುರ್ಗದ ಮಹಾದೇವಪ್ಪ ಯಾದವಾಡ, ಮಾಧುಸ್ವಾಮಿ, ರೇಣುಕಾ ಸೇರಿದಂತೆ ಕಾಂಗ್ರೆಸ್ ಸೇರಲಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ. ಶೆಟ್ಟರ ಫುಲ್ ಆಕ್ಟಿವ್ ಆಗಿದ್ದು, “ಸೈಲೆಂಟ್ ಶೆಟ್ಟರ ಈಗ ವೈಲೆಂಟ್” ಆಗಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನೆ ಇನ್ ಸೈಡ್ ಸ್ಟೋರಿ. ಓದಲೇಬೇಕಾದ ಸ್ಟೋರಿ.

ಪೊಲೀಸ್ ಪೇದೆ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಧಾರವಾಡದಲ್ಲಿ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಧಾರವಾಡ ಚಲೋ ಬೃಹತ್ ಪ್ರತಿಭಟನೆ ನಡೆಯಲಿದೆ. ಧಾರವಾಡ ವಿದ್ಯಾಕಾಶಿ ಎಂದು

Live Cricket

error: Content is protected !!