ಬಿಜೆಪಿ ಟಿಕೇಟ್ ಕೊಡಿಸುವದಾಗಿ ಹೇಳಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ಚೈತ್ರಾ ಕುಂದಾಪುರ ವಿಷಯವಾಗಿ ಶಾಸಕ ಅರವಿಂದ ಬೆಲ್ಲದ ಪ್ರತಿಕ್ರೀಯಿಸಿದ್ದಾರೆ. ಚೈತ್ರಾ ನಂತವರು ಎಲ್ಲ ಕಡೆ ಇರ್ತಾರೆ. ಹಣಕ್ಕಾಗಿ ಟಿಕೇಟ್ ಮಾರುವ ಸಂಪ್ರದಾಯ ಬಿಜೆಪಿಯಲ್ಲಿ ಇಲ್ಲ. ಜನ ಹುಷಾರಾಗಿರಬೇಕು ಎಂದು ಬೆಲ್ಲದ ತಿಳಿಸಿದ್ದಾರೆ. ಹಣಕ್ಕಾಗಿ ಬಿಜೆಪಿಯಲ್ಲಿ ಟಿಕೇಟ್ ಮಾರಾಟ ಮಾಡುತ್ತಾರೆ ಅನ್ನೋ ಜಗದೀಶ ಶೆಟ್ಟರ ಹೇಳಿಕೆ ಬಗ್ಗೆ ಮಾತನಾಡಿದ ಬೆಲ್ಲದ, ಶೆಟ್ಟರ ಅವರು ನಮ್ಮ ಪಕ್ಷದಲ್ಲಿ ಇದ್ದವರು, ಅವರಿಗೆ ಬಿಜೆಪಿ ಬಗ್ಗೆ ಮಾತನಾಡುವ ಆಸಕ್ತಿ ಜಾಸ್ತಿಯಾಗಿದೆ ಎಂದು ವ್ಯಂಗವಾಡಿದರು.

Author: Karnataka Files
Post Views: 2





