ದಾವಣಗೆರೆ ಇಂದ ಇಂದು ಮುಂಜಾನೆ ನಾಪತ್ತೆಯಾಗಿದ್ದ ಇಬ್ಬರು ಮಕ್ಕಳು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಆಟ ಆಡುತ್ತಿದ್ದ ಹದಿನಾರು ವರ್ಷದ ಹುಡುಗಿ, 3 ವರ್ಷದ ಹುಡುಗ ಇಬ್ಬರು ಹುಬ್ಬಳ್ಳಿಯತ್ತ ಹೊರಡುವ ರೈಲು ಹತ್ತಿದ್ದಾರೆ. ಅತ್ತ ಪಾಲಕರು ಮಕ್ಕಳು ನಾಪತ್ತೆಯಾಗಿದ್ದರಿಂದ ರೈಲ್ವೆ ಪೊಲೀಸರ ಮೋರೆ ಹೋಗಿದ್ದಾರೆ. ನಾಪತ್ತೆಯಾದ ಮಕ್ಕಳನ್ನು ಹುಡುಕವಷ್ಟರಲ್ಲಿ ದಾವಣಗೆರೆ ಮಕ್ಕಳು ಹುಬ್ಬಳ್ಳಿ ರೈಲ್ವೇ ಪೊಲೀಸರ ಕೈಗೆ ಸಿಕ್ಕು ಬಿದ್ದಿದ್ದಾರೆ. ಮಕ್ಕಳನ್ನು ವಿಚಾರಿಸಿದಾಗ ದಾವಣಗೆರೆ ಎಂದು ಗೊತ್ತಾಗಿದ್ದು, ಮಕ್ಕಳನ್ನು ಪಾಲಕರಿಗೆ ಒಪ್ಪಿಸಿದ್ದಾರೆ.
Author: Karnataka Files
Post Views: 1





