Download Our App

Follow us

Home » ಕಾನೂನು » ಚೈತ್ರಾ ವಂಚನೆ ಪ್ರಕರಣ, ವಜ್ರದೇಹಿ ಸ್ವಾಮೀಜಿಗೆ ಸಿ ಸಿ ಬಿ ಬುಲಾವ್

ಚೈತ್ರಾ ವಂಚನೆ ಪ್ರಕರಣ, ವಜ್ರದೇಹಿ ಸ್ವಾಮೀಜಿಗೆ ಸಿ ಸಿ ಬಿ ಬುಲಾವ್

ಬಿಜೆಪಿ ಟಿಕೇಟ್ ಕೊಡಿಸುವದಾಗಿ ಹೇಳಿ 5 ಕೋಟಿ ವಂಚನೆ ಮಾಡಿದ ಚೈತ್ರಾ & ಗ್ಯಾಂಗಿನ ಪ್ರಕರಣಕ್ಕೆ ಸಂಬಂದಿಸಿದಂತೆ ಮಂಗಳೂರಿನ ಸ್ವಾಮೀಜಿಯೊಬ್ಬರಿಗೆ ಬೆಂಗಳೂರಿನ ಸಿ ಸಿ ಬಿ ನೋಟಿಸ್ ಜಾರಿ ಮಾಡಿದೆ. ಮಂಗಳೂರಿನ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಗೆ ನೋಟಿಸ್ ಜಾರಿ ಮಾಡಿರುವ ಸಿ ಸಿ ಬಿ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ. 5 ಕೋಟಿ ವಂಚಿಸಿ ಸಿಕ್ಕುಬಿದ್ದಿರುವ ವಂಚಕಿ ಚೈತ್ರಾ ಈ ಹಿಂದೆ ವಜ್ರದೇಹಿ ಸ್ವಾಮೀಜಿ ಹೆಸರು ಪ್ರಸ್ತಾಪ ಮಾಡಿದ್ದಳು ಎನ್ನಲಾಗಿದೆ. ಆದರೆ ವಜ್ರದೇಹಿ ಸ್ವಾಮೀಜಿ, ಚೈತ್ರಾ ಬಂಧನವಾಗುತ್ತಿದ್ದಂತೆ, ನನಗೂ ಚೈತ್ರಾಗೂ ಸಂಬಂಧವಿಲ್ಲ ಎಂದು ಹೇಳಿದ್ದರು. ಸಧ್ಯ ಈ ಪ್ರಕರಣ ಬಗೆದಷ್ಟು ಆಳಕ್ಕೆ ಇಳಿಯುತ್ತಿದ್ದು, ಪ್ರಕರಣ ಇದೀಗ ವಜ್ರದೇಹಿ ಸ್ವಾಮೀಜಿ ಬುಡಕ್ಕೆ ಬಂದಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!