ರಾಜ್ಯ ಕಾಂಗ್ರೇಸ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಉತ್ತರಾಖಂಡದಲ್ಲಿರುವ ಕೇದಾರನಾಥನ ದರ್ಶನ ಪಡೆದರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತು ಕುಟುಂಬ ಸಮೇತರಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ದರ್ಶನ ಪಡೆದರು. ಕೇದಾರನಾಥ ದೇವಸ್ಥಾನದ ಮುಂದೆ ನಿಂತು ಫೋಟೋ ತೆಗೆಸಿಕೊಂಡ ಲಕ್ಷ್ಮೀ ಹೆಬ್ಬಾಳಕರ, ನಾಡಿನ ಒಳತಿಗಾಗಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ವಿನಯ ಗುರೂಜಿ ಸಹ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.

“ಕೈಲಾಸ ಪರ್ವತದ ನಂತರ ಕೇದಾರನಾಥವನ್ನು ಶಿವನ ಎರಡನೇ ವಾಸಸ್ಥಾನವೆಂದು ಕರೆಯಲಾಗುತ್ತದೆ ಉತ್ತರಾಖಂಡ ರಾಜ್ಯದ ಶ್ರೀ ಕೇದಾರನಾಥ್ ಸ್ವಾಮಿಯ ದರ್ಶನ, ಆಶೀರ್ವಾದ ಪಡೆದು, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದೆ. ನೈಸರ್ಗಿಕವಾಗಿಯೇ ಅಲೌಕಿಕ ದೃಶ್ಯಗಳಿಂದ ಕೂಡಿರುವ ಈ ದೇವಾಲಯ ಪವಾಡಗಳು ಹಾಗೂ ಅನೇಕ ಪೌರಾಣಿಕ ಕಥೆಗಳನ್ನು ಒಳಗೊಂಡಿರುವುದು ವಿಶೇಷ. || ಹರ ಹರ ಮಹಾದೇವ || ಎಂದು ಲಕ್ಷ್ಮೀ ಹೆಬ್ಬಾಳಕರ ( ಟ್ವಿಟ್ಟರ್ ) ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
Author: Karnataka Files
Post Views: 8





