ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವಕ್ಕೆ ಗಂಡಾಂತರವಿದ್ದು, ವಿಧಾನಸಭೆ ಹಾಗೂ ಲೋಕಸಭೆಗಳು ದುಡ್ಡಿದ್ದವರ ಪಾಲಾಗುತ್ತವೆ ಎಂದು ಆಳಂದ ಶಾಸಕ ಬಿ ಆರ್ ಪಾಟೀಲ್ ತಿಳಿಸಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕಳವಳಕಾರಿ ಸಂಗತಿ ಹೊರಹಾಕಿದ ಬಿ ಆರ್ ಪಾಟೀಲ್, ಬಂಡವಾಳ ಶಾಹಿಗಳ ಕೈಯಲ್ಲಿ ಶಾಸಕಾಂಗ ಸಿಗಲಿದೆ ಎಂದು ಹೇಳಿದರು. ಜಯಪ್ರಕಾಶ ನಾರಾಯಣ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದರೆ ಅವರು ಬಿಜೆಪಿ ಸರ್ಕಾರದಲ್ಲಿ ಆಸ್ತಿತ್ವಕ್ಕೆ ಬಂದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರದ್ದು ಪಡಿಸಿ, ಬಡವರ ಕೈಗೆ ಜಮೀನು ಸಿಗಬೇಕು ಎಂದು ಆಗ್ರಹಿಸಿದರು. ಇದು ನನ್ನ ಮತ್ತು ಸಿದ್ದರಾಮಯ್ಯನವರ ಕೊನೆಯ ಚುನಾವಣೆಯಾಗಿದ್ದು, ಹಣ ಸುರಿದು ಚುನಾವಣೆ ಮಾಡುವ ಶಕ್ತಿ ನಮಗಿಲ್ಲ ಎಂದು ತಿಳಿಸಿದರು.
Author: Karnataka Files
Post Views: 1





