Download Our App

Follow us

Home » ಅಪರಾಧ » ಧಾರವಾಡ ಜೈಲಿನಲ್ಲಿ ಕೈದಿ ಮತ್ತು ಜೈಲು ಸಿಬ್ಬಂದಿ ನಡುವೆ ಡಿಶುಂ, ಡಿಶುಂ.

ಧಾರವಾಡ ಜೈಲಿನಲ್ಲಿ ಕೈದಿ ಮತ್ತು ಜೈಲು ಸಿಬ್ಬಂದಿ ನಡುವೆ ಡಿಶುಂ, ಡಿಶುಂ.

ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕೈದಿ ಹಾಗೂ ಸಿಬ್ಬಂದಿಯೊಬ್ಬರ ನಡುವೆ ಮಾರಾಮಾರಿ ನಡೆದು ಇದೀಗ ಇಬ್ಬರೂ ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. 

ಮೋಹನ ಬಡಿಗೇರ ಎಂಬ ಜೈಲು ಸಿಬ್ಬಂದಿ ಹಾಗೂ ಪ್ರಶಾಂತ್ ಅಲಿಯಾಸ್ ಪಾಚು ಎಂಬ ಕೈದಿ ನಡುವೆಯೇ ಈ ಮಾರಾಮಾರಿ ನಡೆದಿದೆ. ಪ್ರಶಾಂತ ಎಂಬ ಕೈದಿ ಅನೇಕ ದಿನಗಳಿಂದ ಧಾರವಾಡದ ಕೇಂದ್ರ ಕಾರಾಗೃಹದಲ್ಲಿಯೇ ಸೆರೆವಾಸ ಅನುಭವಿಸುತ್ತಿದ್ದಾನೆ. ಇಂದು ಕ್ಷುಲ್ಲಕ ಕಾರಣಕ್ಕಾಗಿ ಕೈದಿ ಹಾಗೂ ಸಿಬ್ಬಂದಿ ಮಧ್ಯೆ ಮಾರಾಮಾರಿ ನಡೆದಿದೆ.

ಪ್ರಶಾಂತ ಎಂಬ ಕೈದಿ ಬಾಚಣಿಕೆಯನ್ನೇ ಚಾಕುವಿನಂತೆ ಮಾಡಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಇಬ್ಬರೂ ಕೈಕೈ ಮಿಲಾಯಿಸಿದ್ದರಿಂದ ಇಬ್ಬರಿಗೂ ಗಾಯಗಳಾಗಿವೆ. ಸದ್ಯ ಇಬ್ಬರನ್ನೂ ಧಾರವಾಡದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!