ಕರ್ನಾಟಕ ಬಿಜೆಪಿಯ ನೂತನ ಸಾರಥಿಯಾಗಿ ಆಯ್ಕೆಯಾದ ಮೇಲೆ ಬಿ ವೈ ವಿಜಯೇಂದ್ರ, ಪಕ್ಷ ಸಂಘಟನೆಯತ್ತ ಹೆಜ್ಜೆ ಇಟ್ಟಿದ್ದಾರೆ. ಸಂಘಟನೆಗೆ ನವ ಚೈತನ್ಯ ತುಂಬುವ ಮೊದಲ ಹೆಜ್ಜೆಯಾಗಿ, ಇಂದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬೂತ್ ಅಧ್ಯಕ್ಷ, ಶಶಿಧರ್ ಅವರ ನಿವಾಸಕ್ಕೆ ಭೇಟಿ ನೀಡಿ ದೀಪಾವಳಿಯ ಶುಭ ಕೋರುವುದರೊಂದಿಗೆ ಬೂತ್ ಮಟ್ಟದಲ್ಲಿ ಪಕ್ಷವನ್ನು ದೃಢೀಕರಿಸಲು ಸಂಕಲ್ಪ ತೊಡಲಾಯಿತು. ಬೂತ್ ಕಾರ್ಯಕರ್ತರನ್ನು ಭೇಟಿಯಾಗಿ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸಕ್ಕೆ ವಿಜಯೇಂದ್ರ ಮುಂದಾಗಿದ್ದಾರೆ. ಈ ವಿಷಯವನ್ನು ಖುದ್ದು ವಿಜಯೇಂದ್ರ ಅವರೇ “ಎಕ್ಸ್ ” ( ಟ್ವಿಟರ್ ) ನಲ್ಲಿ ಬರೆದುಕೊಂಡಿದ್ದಾರೆ.
” ಮೊದಲ ಹೆಜ್ಜೆ ಬೂತಿನೆಡೆಗೆ ಗುರಿಯು ಒಂದೇ ಗೆಲುವಿನೆಡೆಗೆ”
ಕಾರ್ಯಕರ್ತರು, ನಮ್ಮ ಶಕ್ತಿ ಮತದಾರ, ನಮ್ಮ ಬಂಧು
“ಮತ್ತೆ ಬಿಜೆಪಿ -ಮತ್ತೊಮ್ಮೆಮೋದಿ
ಬೂತ್ ಗೆಲ್ಲಿಸಿ -ದೇಶ ಗೆಲ್ಲಿಸಿ.
ಸಂಕಲ್ಪ ನಮ್ಮದು -ಆಶೀರ್ವಾದ ನಿಮ್ಮದು ????”.
Author: Karnataka Files
Post Views: 15





