ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಬಡವರ್ಗದ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಭಾರತ ಸರ್ಕಾರ ಆರಂಭಿಸಿದ ರಿಯಾಯತಿ ದರದ ಭಾರತ ದಾಲ, ಈರುಳ್ಳಿ, ಹುಬ್ಬಳ್ಳಿಗೆ ಕಾಲಿಟ್ಟಿದೆ.
ಹುಬ್ಬಳ್ಳಿಯಲ್ಲಿಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿ, ಬಡವರಿಗೆ ಭಾರತ ದಾಲ ಹಾಗೂ ಈರುಳ್ಳಿಯನ್ನು ಹಂಚಿದರು. ಕಡಲೆಬೇಳೆ 60 ರೂಪಾಯಿಗೆ ಒಂದು ಕೆಜಿ ಮತ್ತು ಈರುಳ್ಳಿ ಒಂದು ಕೆಜಿಗೆ 25 ರೂಪಾಯಿ ದರ ನಿಗದಿ ಮಾಡಲಾಗಿದೆ. ಒಬ್ಬರಿಗೆ ಒಂದು ಕೆಜಿ ಕಡಲೆಬೇಳೆ 5 ಕೆಜಿ ಈರುಳ್ಳಿ ನೀಡಲಾಗುತ್ತಿದೆ.
Author: Karnataka Files
Post Views: 4





