ನಮ್ಮ ಕರ್ನಾಟಕದ ಪೊಲೀಸರು ಅದೆಷ್ಟು ಕ್ಷಿಪ್ರಗತಿಯಲ್ಲಿ ಅಪರಾಧ ಪತ್ತೆ ಹಚ್ಚುತ್ತಾರೆಂದರೆ, ಕಂಪ್ಲೇಂಟ್ ಧಾಖಲಾಗುವದೇ ತಡ, ತನಿಖೆಗಿಳಿದು ಅಪರಾಧ ಪತ್ತೆ ಹಚ್ಚುತ್ತಾರೆ. ಇವತ್ತು ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆ ಕಂಟ್ರೋಲ್ ರೂಮ್ ಗೆ ಮನೆಯಲ್ಲಿ ಕಳ್ಳತನ ಆಗಿದೆ ಎಂದು ಕರೆ ಬಂದಿದೆ. ಹೊಯ್ಸಳ ಸಿಬ್ಬಂದಿ ಕಳ್ಳತನ ಆದ ಮನೆಗೆ ಹೋಗ್ತಾರೆ. ಕಳ್ಳತನ ಆದ ಮನೆಗೆ ಹೋದ ಪೊಲೀಸರು ಒಂದು ಕ್ಷಣ ಗಲಿಬಿಲಿಗೋಳ್ತಾರೆ. ಪೊಲೀಸರು ವಿಚಾರಿಸಿದಾಗ ಟಾಯ್ಲೆಟ್ ನಲ್ಲಿರುವ ಕಂಚಿನ ಚೆಂಬೂ ಕಳ್ಳತನವಾಗಿದ್ದ ವಿಷಯ ಬೆಳಕಿಗೆ ಬರುತ್ತದೆ. ಮನೆಯವರನ್ನು ವಿಚಾರಿಸಿದಾಗ, ಪೋಲಿಸ್ ಕಂಪ್ಲೇಂಟ್ ಕೊಟ್ಟಿದ್ದೇವೆ ಎಂಬ ಸುದ್ದಿ ತಿಳಿದು, ನೀವು ಬರುವಷ್ಟರಲ್ಲಿ, ಚೆಂಬೂ ಕದ್ದಿದ್ದ ಪಕ್ಕದ ಮನೆಯವನು ಚೆಂಬೂ ಮನೆಯಲ್ಲಿ ಇಟ್ಟು ಹೋಗಿದ್ದಾನೆ ಎಂಬ ಉತ್ತರ ಸಿಗುತ್ತದೆ. ಅಲ್ಲಿಗೆ ಪ್ರಕರಣ ಸುಖಾಂತ್ಯ ಕಾಣುತ್ತದೆ.
ಪೊಲೀಸರು ಹಾಗೂ ದೂರುದಾರ ಮಾತನಾಡಿದ ಆಡಿಯೋ ವೈರಲ್ ಆಗಿದೆ.
Author: Karnataka Files
Post Views: 1





