Download Our App

Follow us

Home » ಭಾರತ » ಈ ರಸ್ತೆಯಲ್ಲಿ ಇಂಜಿನಿಯರಗಳು ರೊಕ್ಕ ಹೊಡೆದಿದ್ದೆ ಹೊಡೆದಿದ್ದು. ಅನಾಥ ರಸ್ತೆಯ ಕಥೆ ಇದು ಧಾರವಾಡ ಟು ನವಲಗುಂದ

ಈ ರಸ್ತೆಯಲ್ಲಿ ಇಂಜಿನಿಯರಗಳು ರೊಕ್ಕ ಹೊಡೆದಿದ್ದೆ ಹೊಡೆದಿದ್ದು. ಅನಾಥ ರಸ್ತೆಯ ಕಥೆ ಇದು ಧಾರವಾಡ ಟು ನವಲಗುಂದ

 ಹೇಳಲು ಹೊರಟಿದ್ದು ಧಾರವಾಡ ಟು ನವಲಗುಂದ ರಸ್ತೆಯ ಕಥೆ. ಧಾರವಾಡದಿಂದ ಹೆಬಸೂರು ರಾಜ್ಯ ಹೆದ್ದಾರಿ 52 ರ ರಸ್ತೆಯ ರೋಚಕ ಕಥೆ ಇದು. ಅಪ್ಪಿ ತಪ್ಪಿ ಈ ರಸ್ತೆಯಲ್ಲಿ ಬಾಣಂತಿಯರು ಸಂಚರಿಸಿದರೆ ನಾರ್ಮಲ್ ಡಿಲೆವರಿ ಗ್ಯಾರೆಂಟಿ. ಅಷ್ಟರ ಮಟ್ಟಿಗೆ ಈ ರಸ್ತೆ ಕೆಟ್ಟು ಹೋಗಿದೆ.

ನವಲಗುಂದದಿಂದ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಇದೀಗ ಅನಾಥವಾಗಿದೆ. ಹಾಗೆಂದ ಮಾತ್ರಕ್ಕೆ ಈ ರಸ್ತೆ ಕಾಮಗಾರಿ ನಡೆದಿಲ್ಲ ಅಂತಿಲ್ಲ. ಆದರೆ ಅದು ಕೇವಲ ಹಾಳೆಯ ಮೇಲೆ. ರಸ್ತೆ ಕಾಮಗಾರಿ ಮಾಡಿದ್ದೇವೆಂದು ಹೇಳಿ ಕಳೆದ 5 ವರ್ಷಗಳಿಂದ ಮೂರು ಕೋಟಿ ದುಡ್ಡು ಕೊಳ್ಳೆ ಹೊಡೆದಿದ್ದಾರೆ. ಲೋಕೋಪಯೋಗಿ ಕೋಟಿ ಅಧಿಕಾರಿಗಳು ಈ ರಸ್ತೆ ಹೆಸರಲ್ಲಿ ಕೋಟಿ ತಿಂದು ತೇಗಿದ್ದಾರೆ. ಇಷ್ಟಾದರು ಈ ರಸ್ತೆ 5 ವರ್ಷಗಳಿಂದ ಇದ್ದ ಪರಿಸ್ಥಿತಿಯಲ್ಲಿಯೇ ಇದೆ. ಅದೇ ತೆಗ್ಗುಗಳು, ಕಿತ್ತೋದ ಡಾಂಬರ ಕಂಡು ಬರುತ್ತದೆ.

ಸಧ್ಯ ಇದು ಅನಾಥ ರಸ್ತೆಯಾಗಿದೆ. ಇದಕ್ಕೆ ಅಪ್ಪನು ಇಲ್ಲ ಅಮ್ಮನು ಇಲ್ಲ, ಕೇಳುವವರೇ ಇಲ್ಲದಾಗಿದೆ. ಶಾಸಕರಾದವರು, ಜಿಲ್ಲಾ ಮಟ್ಟದ ಅಧಿಕಾರಿಗಳು ಈ ರಸ್ತೆಯಲ್ಲಿ ನಿಲ್ಲುವುದಿಲ್ಲ. ನವಲಗುಂದಕ್ಕೆ ಹೋಗಬೇಕಾದರೆ ಹುಬ್ಬಳ್ಳಿ ಮೂಲಕ ಹೋಗುತ್ತಾರೆ.

ಹದಗೆಟ್ಟ ಈ ರಸ್ತೆಯ ರಿಪೇರಿ ಮಾಡಿ ಬ್ಯಾಹಟ್ಟಿಯಲ್ಲಿ ಜಿಲ್ಲಾ ಪಂಚಾಯತಿಯ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಹದಿನೈದು ದಿನಗಳ ಕಾಲ ಪ್ರತಿಭಟನೆ ನಡೆಯಿತು. ಆದರೂ ಅಧಿಕಾರಿಗಳು ಮಾತ್ರ ಕ್ಯಾರೇ ಅನ್ನಲಿಲ್ಲ. ಲೋಕೋಪಯೋಗಿ ಇಲಾಖೆಯ ನಾಲ್ಕು ಜನ ಅಧಿಕಾರ ಇಂಜಿನಿಯರ ಬದಲಾದರು ಸಹ ಅವರೆಲ್ಲ, ಈ ರಸ್ತೆಯ ಕಾಮಗಾರಿ ಹೆಸರಲ್ಲಿ ದುಡ್ಡು ಮಾಡಿಕೊಂಡರು ಹೊರತಾಗಿ ರಸ್ತೆ ರಿಪೇರಿ ಮಾಡಲೇ ಇಲ್ಲ. ಕಾಮಗಾರಿ ನೆಪದಲ್ಲಿ ಧಾರವಾಡದಿಂದ ಹೆಬಸೂರು 33 ಕಿಲೋಮೀಟರ್ ರಸ್ತೆಗೆ 3 ಕೋಟಿ ದುಡ್ಡು ಕೊಳ್ಳೆಹೊಡೆಯಲಾಗಿದೆ. ಸರ್ಕಾರ ಬದಲಾದರು ಈ ರಸ್ತೆ ಮಾತ್ರ ಬದಲಾವಣೆ ಕಾಣದಿರುವುದು ದೊಡ್ಡ ದುರಂತ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!