ಜನಸ್ನೇಹಿ ಠಾಣೆಯಾಗಿರುವ ಅಣ್ಣಿಗೇರಿ ಪೊಲೀಸ್ ಠಾಣೆಯ ಪೇದೆ ಮಂಜು ನಾಗಾವಿಯ ದರ್ಪಕ್ಕೆ ಅಣ್ಣಿಗೇರಿ ಜನ ಸಿಡಿದಿದ್ದಾರೆ. ನಿನ್ನೇ ರಾತ್ರಿ ಕಂದಾಯ ಇಲಾಖೆಯ ಅಧಿಕಾರಿ ರಿಷಿ ಸಾರಂಗಿ ಮೇಲೆ ಪೇದೆ ಮಂಜು, ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದರು. ಅಣ್ಣಿಗೇರಿ ಪೊಲೀಸ್ ಠಾಣೆಯ ಪೇದೆ ಮಂಜು ನಾಗಾವಿ, ಮೇಲಿಂದ ಮೇಲೆ ಅಮಾಯಕರಿಗೆ ತೊಂದರೆ ನೀಡುತ್ತಾರೆ ಎಂದು ಅಣ್ಣಿಗೇರಿ ಜನ ಆರೋಪಿಸಿದ್ದಾರೆ.
ಮಂಜು ನಾಗಾವಿಯ ದರ್ಪಕ್ಕೆ ಬೇಸತ್ತ ಜನ ಇಂದು ಅಣ್ಣಿಗೇರಿ ಠಾಣೆಗೆ ಮುತ್ತಿಗೆ ಹಾಕಿ, ಅಮಾನತ್ ಮಾಡಬೇಕೆಂದು ಆಗ್ರಹಿಸಿದ್ದಾರೆ. ಘಟನೆ ನಡೆದ ಮೇಲೆ ಕರ್ನಾಟಕ ಫೈಲ್ಸ್ ಮಂಜು ನಾಗಾವಿಯ ಉಪಟಳದ ಕುರಿತು ಸುದ್ದಿ ಪ್ರಕಟಿಸಿತ್ತು. ಸುದ್ದಿ ಭಿತ್ತರವಾಗುತ್ತಿದ್ದಂತೆ ಸಾರ್ವಜನಿಕರು ಠಾಣೆಗೆ ಮುತ್ತಿಗೆ ಹಾಕಿದ್ದಾರೆ.
ಮಹಾಬಳೇಶ ಹೆಬಸೂರು, ಚಂಬಣ್ಣ ಸುರಕೋಡ, ಅಶೋಕ ಕುರಿ, ಕಾಂಗ್ರೇಸ್ ಮುಖಂಡ ಮಂಜುನಾಥ ಮಾಯಣ್ಣವರ, ಪುರಸಭೆ ಮಾಜಿ ಅಧ್ಯಕ್ಷ ಮುತ್ತು ದ್ಯಾವನೂರು, ಹಿರಿಯರಾದ ಅರ್ಜುನ ಕಲಾಲ್, ಎಮ್ ಎ ಸೌದಾಗರ, ಭರತೇಶ ಜೈನ, ಮುತ್ತು ನಾಗಾವಿಮಠ, ಸೇರಿದಂತೆ ಅನೇಕರು ಪೇದೆ ಮಂಜು ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಮಧ್ಯೆ ವಿಜಯವಾಣಿ ವರದಿಗಾರ ಹೇಮಂತ ಕುರಹಟ್ಟಿ ಅವರು ಪ್ರತಿಭಟನೆಯ ವಿಡಿಯೋ ಮಾಡಲು ಹೋದಾಗ, ವಿಕಾಸ ನಾಯಕವಾಡಿ ಎಂಬಾತ,ಮೊಬೈಲ್ ಕಸಿದುಕೊಂಡು ದರ್ಪ ಮೆರೆದಿದ್ದಾನೆ.
ಆಕ್ರಮ ಚಟುವಟಿಕೆ ತಡೆಯಬೇಕಾದ ಅಣ್ಣಿಗೇರಿ ಠಾಣೆಯ ಪೊಲೀಸರ ಪೈಕಿ ಕೆಲವರು ಊರಲ್ಲಿ ಹಪ್ತಾ ವಸೂಲಿಗೆ ಇಳಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಜನಸ್ನೇಹಿ ಠಾಣೆಯಾಗಿದ್ದ ಅಣ್ಣಿಗೇರಿ ಠಾಣೆಯ ಗೌರವ ಕಡಿಮೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಕ್ರೈಮ್ ಬೀಟ್ ಹೆಸರಲ್ಲಿ ಹೆದರಿಸಿ, ಬೆದರಿಸಿ ದುಡ್ಡು ಹೊಡೆಯೋ ಕೆಲಸ ಮಾಡುತ್ತಿದ್ದಾರೆ. ಇಷ್ಟಾದರು ಅಣ್ಣಿಗೇರಿ ಠಾಣೆಯ ಪಿ ಎಸ್ ಐ ಸುಮ್ಮನೆ ಕುಳಿತಿದ್ದು, ಅನುಮಾನಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಜಿಲ್ಲಾಧಿಕಾರಿಗಳಿಗೂ ಈ ಸುದ್ದಿ ಮುಟ್ಟಿದ್ದು, ನೌಕರರ ಸಂಘ ಸಹ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.





