Download Our App

Follow us

Home » ಭಾರತ » ಸೊಸೆ ಸಾವಿನ ಸುದ್ದಿ ಕೇಳಿ ಅತ್ತೆ ಹೃದಯಾಘಾತದಿಂದ ಸಾವು.

ಸೊಸೆ ಸಾವಿನ ಸುದ್ದಿ ಕೇಳಿ ಅತ್ತೆ ಹೃದಯಾಘಾತದಿಂದ ಸಾವು.

ಅತ್ತೆ ಸೊಸೆ ಅದೆಷ್ಟು ಪ್ರೀತಿಯಿಂದ ಇದ್ದರು ಎಂದರೆ, ಅವರಿಬ್ಬರ ನಡುವೆ ತಾಯಿ ಮಗಳ ಸಂಬಂಧ ಇತ್ತು. ಮನೆಯಲ್ಲಿ ಇದ್ದಾಗ ಒಬ್ಬರನ್ನೊಬ್ಬರು ಬಿಟ್ಟು ಯಾವದೇ ಕೆಲಸ ಮಾಡುತ್ತಿರಲಿಲ್ಲ. ಕೂಡಿ ಬಾಳಿದರೆ ಸ್ವರ್ಗ ಸುಖ ಅಂದಂಗೆ ಅತ್ತೆ ಮತ್ತು ಸೊಸೆಯ ನಡುವೆ ಅಂತಹ ಬಾಂಧ್ಯವ್ಯವಿತ್ತು. ವಿಧಿಯಾಟ ಬೇರೆ ಇತ್ತು. ಮಂಡ್ಯ ಜಿಲ್ಲೆ ಇವತ್ತು ಕಣ್ಣೀರು ಹಾಕಿತು. 

ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಸೊಸೆ ಸಾವಿನ ಸುದ್ದಿ ತಿಳಿದು, ಅತ್ತೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ನಾಗಮಂಗಲ ತಾಲೂಕಿನ ಕಾಡು ಅಂಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು. ಇಡೀ ಗ್ರಾಮ ಕಂಬನಿ ಮಿಡಿದಿದೆ. ಅನಾರೋಗ್ಯದಿಂದ ಸೊಸೆ ಸುಶೀಲಾ (42) ವರ್ಷ ಸಾವನಪ್ಪಿದ್ದಳು. ಈ ಸುದ್ದಿ ಅತ್ತೆಗೆ ಮುಟ್ಟಿಸಿದ ತಕ್ಷಣವೆ ಕುಸಿದು ಬಿದ್ದ 75 ವರ್ಷದ ಅತ್ತೆ ಹುಚ್ಚಮ್ಮ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ.

ಹುಚ್ಚಮ್ಮಗೆ ಐವರು ಗಂಡು ಮಕ್ಕಳಿದ್ದು, ಎರಡನೇ ಮಗನ ಹೆಂಡತಿಯಾಗಿರುವ ಸುಶೀಲಾ ಮೇಲೆ ಅತಿಯಾದ ಪ್ರೀತಿ ಇತ್ತು ಎನ್ನಲಾಗಿದೆ. ಹುಚ್ಚಮ್ಮ ಮತ್ತು ಸುಶೀಲಾ, ಅತ್ತೆ-ಸೊಸೆಯಂತೆ ಇರುವ ಬದಲು‌ ತಾಯಿ‌-ಮಗಳಂತೆ ಇದ್ದರು ಎನ್ನಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!