Download Our App

Follow us

Home » ರಾಜಕೀಯ » ಧಾರವಾಡ ಅಂಜುಮನ್ ಸಂಸ್ಥೆ ಚುನಾವಣೆಗೆ ಅಖಾಡ ಸಜ್ಜು. ಮತ್ತೆ ಕಣಕ್ಕಿಳಿಯಲಿರುವ ಇಸ್ಮಾಯಿಲ್ ತಮಟಗಾರ

ಧಾರವಾಡ ಅಂಜುಮನ್ ಸಂಸ್ಥೆ ಚುನಾವಣೆಗೆ ಅಖಾಡ ಸಜ್ಜು. ಮತ್ತೆ ಕಣಕ್ಕಿಳಿಯಲಿರುವ ಇಸ್ಮಾಯಿಲ್ ತಮಟಗಾರ

ಧಾರವಾಡ ಜಿಲ್ಲೆಯಲ್ಲಿ ಎರಡನೇ ಅತೀ ದೊಡ್ಡ ಸಂಸ್ಥೆಯಾಗಿರುವ ಧಾರವಾಡ ಅಂಜುಮನ್ ಸಂಸ್ಥೆಯ ಚುನಾವಣೆಗೆ ಅಖಾಡ ಸಜ್ಜಾಗಿದೆ. ಎರಡು ಬಾರಿ ಅಧ್ಯಕ್ಷರಾಗಿ ಅಂಜುಮನ್ ಯಶಸ್ವಿಯಾಗಿ ನಡೆಸಿರುವ ಇಸ್ಮಾಯಿಲ್ ತಮಟಗಾರ ಮತ್ತೆ ಈ ಸಲ ಮೈದಾನಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಶಾಸಕನಾಗುವ ಎಲ್ಲ ಅರ್ಹತೆ ಇರುವ ಇಸ್ಮಾಯಿಲ್ ತಮಟಗಾರ ಉತ್ತರ ಕರ್ನಾಟಕದ ಮುಸ್ಲಿಂ ಸಮಾಜದ ನಾಯಕರಾಗಿ ಹೊರಹೊಮ್ಮಿದ್ದಾರೆ. ಮುಸ್ಲಿಂ ಸಮಾಜದ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆದಾಗ ಎದೆಕೊಟ್ಟು ನಿಲ್ಲುವ ಇಸ್ಮಾಯಿಲ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಮೂರು ಬಾರಿ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದಿಂದ ವಿಧಾನ ಸಭೆಗೆ ಸ್ಪರ್ಧಿಸಿದ್ದ ಇಸ್ಮಾಯಿಲ್, ಈ ಬಾರಿ ವಿಧಾನ ಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅಂಜುಮನ್ ಸಂಸ್ಥೆಗೆ      ಸದಸ್ಯತ್ವ ನೋಂದಣಿ ಆರಂಭವಾಗಿದ್ದು,   ಸದಸ್ಯತ್ವಕ್ಕೆ 560 ರೂಪಾಯಿ, ಆಜೀವ ಸದಸ್ಯತ್ವಕ್ಕೆ 10 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ. ಕಳೆದ ಸಲ ಇದ್ದ 160 ಎಮ್ ಸಿ ಮೆಂಬರಗಳ ಸಂಖ್ಯೆ 80 ಕ್ಕೆ ಇಳಿಸಲಾಗಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!