ನಿವೃತ್ತರ ಸ್ವರ್ಗ, ಶೈಕ್ಷಣಿಕ ಕಾಶಿ ಎಂದೆಲ್ಲ ಕರೆಸಿಕೊಳ್ಳುವ ಧಾರವಾಡದಲ್ಲಿ ಭೀಕರ ಹತ್ಯೆ ನಡೆದಿದೆ. ಮರಾಠಾ ಕಾಲೋನಿ ರಸ್ತೆಯಲ್ಲಿ ಕೊಲೆ ನಡೆದಿದ್ದು, ಕೊಲೆಯಾದವನನ್ನು ಫಕೀರಪ್ಪ ಎಂದು ಗುರುತಿಸಲಾಗಿದೆ.
ಜನನಿಬೀಡ ರಸ್ತೆಯಲ್ಲಿ ಈ ಕೊಲೆ ನಡೆದಿದ್ದು, ಆತಂಕಕ್ಕೆ ಕಾರಣವಾಗಿದೆ. ಕೊಲೆಯಾದ ಫಕಿರಪ್ಪನ ಮುಖವನ್ನು ಕಲ್ಲಿನಿಂದ ಜಜ್ಜಲಾಗಿದ್ದು, ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ದೌಡಾಯಿಸಿದ್ದಾರೆ. ಧಾರವಾಡದಲ್ಲಿ ಇತ್ತೀಚಿಗೆ ಮರಿ ರೌಡಿಗಳ ಹಾವಳಿ ಮಿತಿ ಮೀರಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ
Author: Karnataka Files
Post Views: 1





