ಧಾರವಾಡದ ಸೂಪರ ಮಾರುಕಟ್ಟೆಯಲ್ಲಿ ಕುಡುಕನೊಬ್ಬ ಚಾಕು ಹಿಡಿದು ಓಡಾಡುತ್ತ ಭಯ ಹುಟ್ಟಿಸಿದ ಘಟನೆ ನಡೆದಿದೆ. ಬೀದಿ ಬದಿ ಹಣ್ಣಿನ ವ್ಯಾಪಾರಿಗಳ ಜೊತೆ ಜಗಳ ತೆಗೆದ ಕುಡುಕ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಆತನಿಗೆ ಸಾರ್ವಜನಿಕರು ಸಮಾಧಾನ ಪಡಿಸಿದರು ಮತ್ತೆ ಮತ್ತೆ ಪುಂಡಾಟ ನಡೆಸಿದಾಗ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಧಾರವಾಡದ ಪ್ರಮುಖ ಮಾರುಕಟ್ಟೆಯಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಹಣ್ಣು ತರಕಾರಿ ಖರೀದಿಸಲು ಬಂದವರು ಕಿರಿಕಿರಿ ಅನುಭವಿಸುವಂತಾಗಿದೆ.
Author: Karnataka Files
Post Views: 4





