ಮುಸ್ಲಿಂರಿಗೆ ಸಂಪತ್ತು ಹಂಚುತ್ತೇನೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ನೂರಕ್ಕೆ ನೂರು ಸತ್ಯವಿದೆ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಮುಸ್ಲಿಂರು ನಮ್ಮ ನಾಡಿನವರು ಅವರಿಗೂ ಈ ನೆಲದ ಮೇಲೆ ಹಕ್ಕಿದೆ ಎಂದರು. ಬಿಜೆಪಿಯವರು ಹಿಂದು ಮುಸ್ಲಿಂ ಜಗಳ ಹಚ್ಚಿ ರಾಜಕೀಯ ಮಾಡುತ್ತಾರೆ ಎಂದು ತರಾಟೆಗೆ ತೆಗೆದುಕೊಂಡ ಅವರು, ವಿರೋದ ಪಕ್ಷ ಬಿಜೆಪಿಯವರು ಬೆಳಗಾವಿ ಅಧಿವೇಶನದ ಸಮಯ ಹಾಳು ಮಾಡದೆ, ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯವಾಗಿ ಹೆಚ್ಚು ಚರ್ಚಿಸಲಿ ಎಂದು ಮನವಿ ಮಾಡಿದರು.
Author: Karnataka Files
Post Views: 5





