ಧಾರವಾಡದಲ್ಲಿ ಮತ್ತೆ ಪುಂಡರು ಬಾಲ ಬಿಚ್ಚಿದ್ದಾರೆ. ಧಾರವಾಡದ ಸಿ ಬಿ ಟಿ ಬಳಿ ಪುಂಡರ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದೆ. ಎರಡು ಕಡೆಯ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಸಿ ಬಿ ಟಿ ಬಳಿ ಈ ಘಟನೆ ನಡೆದಿದ್ದು, ಜಗಳ ಬಿಡಿಸಲು ಬಂದವರಿಗೂ ಹೊಡೆತ ಬಿದ್ದಿದೆ ಎನ್ನಲಾಗಿದೆ. ಯಾಕೋ ಇತ್ತೀಚಿಗೆ ಧಾರವಾಡದಲ್ಲಿ ಮರಿ ಪುಡಾರಿಗಳ ಪುಂಡಾಟಿಕೆ ಮಿತಿ ಮೀರಿದ್ದು, ಪುಂಡರು ಪೊಲೀಸರಿಗೆ ಸವಾಲೆಸೆದಂತಾಗಿದೆ.
Author: Karnataka Files
Post Views: 1





