ಧಾರವಾಡ ಲೋಕಸಭಾ ಚುನಾವಣೆಗೆ ಕಾಂಗ್ರೇಸ್ ರಂಗ ತಾಲೀಮು ಆರಂಭಿಸಿದೆ. ಅಧಿವೇಶನದ ಕೊನೆಯ ದಿನದ ಕಲಾಪ ಮುಗಿಸಿ ಧಾರವಾಡಕ್ಕೆ ಬಂದ ಧಾರವಾಡ ಜಿಲ್ಲಾ ಲೋಕಸಭಾ ಉಸ್ತುವಾರಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರರನ್ನು ರಜತ್ ಉಳ್ಳಾಗಡ್ಡಿಮಠ ಬೆಂಬಲಿಗರು ಅದ್ದೂರಿಯಾಗಿ ಸ್ವಾಗತಿಸಿದರು.

ಟೋಲನಾಕಾ ಬಳಿ ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ರಜತ್ ಬೆಂಬಲಿಗರು ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಸ್ವಾಗತಿಸಿದರು. ಬರಲಿರುವ ಧಾರವಾಡ ಲೋಕಸಭಾ ಚುನಾವಣೆಗೆ ರಜತ್ ಉಳ್ಳಾಗಡ್ಡಿಮಠರಿಗೆ ಟಿಕೇಟ್ ನೀಡುವಂತೆ ಮನವಿ ಸಲ್ಲಿಸಿದರು. ಅಲ್ಲಿಂದ ಮಯೂರ ರೆಸಾರ್ಟಗೆ ತೆರಳಿದ ಲಕ್ಷ್ಮೀ ಹೆಬ್ಬಾಳಕರ ಜಿಲ್ಲೆಯ ಕಾಂಗ್ರೇಸ್ ಮುಖಂಡರ ಜೊತೆ ಚರ್ಚೆ ನಡೆಸಿದರು.
Author: Karnataka Files
Post Views: 3





