ಮಗ ಯತಿಂದ್ರರನ್ನು ಲೋಕಸಭಾ ಅಭ್ಯರ್ಥಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಡಿದ ಆರೋಪ ಮಾಡಿದ ಬಿಜೆಪಿಯ ಲೆಹರ ಸಿಂಗ ಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಜನ ನೀವೆ ನಿಲ್ಲಬೇಕು ಅಂದರೆ ನಿಲ್ತಾರೆ, ಬೇಡ ಅಂದ್ರೆ ನಿಲ್ಲಲ್ಲ, ಬಿಜೆಪಿಯವರು ಸುಮ್ಮನೆ ಕಾಟಾಚಾರಕ್ಕೆ ಮಾತನಾಡುತ್ತಾರೆ ಅವರಿಗೆ ಬುದ್ದಿ ಕಡಿಮೆ ಇದೆ ಎಂದು ಹೇಳಿದರು. ಇದೇ ವೇಳೆ ಜಾತಿ ಜನಗಣತಿ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಆ ವರದಿಯಲ್ಲಿ ಏನಿದೆ ಎಂದು ನನಗೂ ಗೊತ್ತಿಲ್ಲ, ಅವರಿಗೂ ಗೊತ್ತಿಲ್ಲ, ಸುಮ್ಮನೆ ಊಹೆ ಮಾಡಿಕೊಂಡು ವಿರೋದ ಮಾಡುತ್ತಿದ್ದಾರೆ ಎಂದರು.
Author: Karnataka Files
Post Views: 5





