ಹುಬ್ಬಳ್ಳಿ ಮಹಾನಗರ ರಾಜ್ಯದ ಎರಡನೇ ರಾಜಕೀಯ ಶಕ್ತಿ ಕೇಂದ್ರ. ಉತ್ತರ ಕರ್ನಾಟಕದ ಹೆಬ್ಬಾಗಿಲು ಅಂತ ಕರೆಯುವ ಹುಬ್ಬಳ್ಳಿಯಲ್ಲಿ 90 ರ ದಶಕದಲ್ಲಿ ದಿವಂಗತ, ವಿಶ್ವಪ್ರಕಾಶ ಉಳ್ಳಾಗಡ್ಡಿಮಠ, ಕಾಂಗ್ರೇಸ್ ನ ರಾಜಕೀಯ ಅಂಗಳದಲ್ಲಿ ಅತೀ ಎತ್ತರಕ್ಕೆ ಬೆಳೆದು ನಿಂತಿದ್ದರು. ಅಷ್ಟೇ ಅಲ್ಲಾ ತಮ್ಮ ಜೊತೆ ಅನೇಕರನ್ನು ಬೆಳೆಸಿದ ಕೀರ್ತಿ ವಿಶ್ವಪ್ರಕಾಶ ಉಳ್ಳಾಗಡ್ಡಿಮಠರಿಗೆ ಸಲ್ಲುತ್ತದೆ.
ಅತ್ತ ಸೋನಿಯಾ ಗಾಂಧಿಯವರ ಜೊತೆ ರಾಜ್ಯದಲ್ಲಿ ಡಿ ಕೆ ಶಿವಕುಮಾರ ಅವರ ಜೊತೆ ಉತ್ತಮ ನಂಟು ಹೊಂದಿದ್ದ ದಿವಂಗತ ವಿಶ್ವಪ್ರಕಾಶ ಉಳ್ಳಾಗಡ್ಡಿಮಠ ಹಿಂದೊಮ್ಮೆ ಕಲಘಟಗಿ ಮತಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗೆ ಬಿಟ್ಟರು ಅನ್ನುವಷ್ಟರಲ್ಲಿ ಟಿಕೇಟ್ ಮತ್ತೊಬ್ಬರಿಗೆ ಬಿಟ್ಟುಕೊಟ್ಟಿದ್ದರು. ಮಾಜಿ ಸಚಿವ ಕೆ ಎನ್ ಗಡ್ಡಿ, ದಿವಂಗತ ಸಿ ಎಸ್ ಶಿವಳ್ಳಿ, ಹಾಲಿ ಧಾರವಾಡ ಗ್ರಾಮೀಣ ಶಾಸಕ ಮಾಜಿ ಸಚಿವ ವಿನಯ ಕುಲಕರ್ಣಿ, ಧಾರವಾಡ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಅನೀಲ್ ಪಾಟೀಲ ಸೇರಿದಂತೆ ಅನೇಕ ನಾಯಕರ ಜೊತೆ ಸ್ನೇಹ ಸಂಪಾದಿಸಿದ್ದರು. ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ದಿವಂಗತ ವಿಶ್ವಪ್ರಕಾಶ ಉಳ್ಳಾಗಡ್ಡಿಮಠ, ಕಾಂಗ್ರೇಸ್ ಗಟ್ಟಿಯಾಗಿ ಬೆಳೆಸಿದ್ದರು, ಅಧಿಕಾರದಿಂದ ವಂಚಿತರಾದರು. ಒಮ್ಮೆ ಎಮ್ ಎಲ್ ಎ ಯಾಗಬೇಕು ಎಂದು ಅಂದುಕೊಂಡಿದ್ದ ವಿಶ್ವಪ್ರಕಾಶ ಉಳ್ಳಾಗಡ್ಡಿಮಠರಿಗೆ ಧಾರವಾಡ ಜಿಲ್ಲೆಯ ಮೂಲೆ ಮೂಲೆಯಲ್ಲಿ ಅಭಿಮಾನಿಗಳು ಹಾಗೂ ಸ್ನೇಹಿತರಿದ್ದರು.

ಅಪ್ಪ ತೀರಿಕೊಂಡಾಗ ಹೈಸ್ಕೂಲ್ ಕಟ್ಟೆ ಹತ್ತಿದ್ದ ವಿಶ್ವಪ್ರಕಾಶ ಉಳ್ಳಾಗಡ್ಡಿಮಠರ ಏಕೈಕ ಸುಪುತ್ರ ರಜತ್ ಉಳ್ಳಾಗಡ್ಡಿಮಠ, ವಿಧ್ಯಾರ್ಥಿ ದೆಸೆಯಿಂದ ಎನ್ ಎಸ್ ಯೂ ಐ ದಿಂದ ರಾಜಕೀಯ ಆರಂಭಿಸಿದರು. ಸಧ್ಯ ವಿಧ್ಯಾನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ರಜತ್, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿ, ಅಂದಿನ ಶಾಸಕರು, ಮಂತ್ರಿಗಳಾಗಿದ್ದ ಜಗದೀಶ ಶೆಟ್ಟರ ವಿರುದ್ಧ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನೇಕ ಹೋರಾಟಗಳನ್ನು ಮಾಡಿ ಗಮನ ಸೆಳೆದಿದ್ದರು.
ಇನ್ನೇನು ರಜತ್ ಉಳ್ಳಾಗಡ್ಡಿಮಠ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗ್ತಾರೆ ಅನ್ನುವಷ್ಟರಲ್ಲಿ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಜಗದೀಶ್ ಶೆಟ್ಟರ, ಬಿಜೆಪಿ ತೊರೆದು ಕಾಂಗ್ರೇಸ್ ಪಕ್ಷಕ್ಕೆ ಬಂದಿದ್ದರಿಂದ ಟಿಕೇಟ್ ಜಗದೀಶ್ ಶೆಟ್ಟರ ಅವರ ಪಾಲಾಯಿತು. ರಜತ್, ಅಪ್ಪನಂತೆ ತ್ಯಾಗಜೀವಿಯಾದರು.

ಸಧ್ಯ ಧಾರವಾಡ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ರಜತ್ ಉಳ್ಳಾಗಡ್ಡಿಮಠ, ಕ್ಷೇತ್ರ ಸುತ್ತುತ್ತಿದ್ದಾರೆ. ರಾಜ್ಯದ ಅತ್ಯಂತ ಪ್ರತಿಷ್ಟಿತ ಮತ್ತು ಹೈ ವೋಲ್ಟೇಜ್ ಕ್ಷೇತ್ರ ಎಂದೆ ಹೆಸರಾದ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ನಲ್ಲಿ ಟಿಕೇಟ್ ಗಾಗಿ ತೀವ್ರ ಪೈಪೋಟಿ ನಡೆದಿದ್ದು, 15 ಜನ ಅಕಾಂಕ್ಷಿಗಳ ಜೊತೆ ರಜತ್ ಹೆಸರು ಕೇಳಿ ಬರುತ್ತಿದೆ. ರಜತ್ ಗೆ ಇನ್ನಾದರು ರಾಜಕೀಯ ಅದೃಷ್ಟ ಸಿಗತ್ತಾ ಕಾದುನೋಡಬೇಕಿದೆ.





