ಧಾರವಾಡ ಇಂದು ಮತ್ತೊಂದು ಕೊಲೆಗೆ ಸಾಕ್ಷಿಯಾಗಿದೆ. ಧಾರವಾಡದ ಸಂಗಮ ಸರ್ಕಲ ಬಳಿ ಇರುವ ಕೋಣೆಯೊಂದರಲ್ಲಿ ಹೋಟೆಲ್ ಸಪ್ಲೈಯರನೊಬ್ಬನನ್ನ ಕ್ಷುಲ್ಲಕ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಒಂದೇ ಕೋಣೆಯಲ್ಲಿ ಮಲಗುತ್ತಿದ್ದ ಇಬ್ಬರು ಯುವಕರು, ಪರಸ್ಪರ ಜಗಳವಾಡಿದ್ದು, ನಂತರ ಜಗಳ ವಿಕೋಪಕ್ಕೆ ಹೋಗಿ ಕೊಲೆ ನಡೆದಿದೆ ಎನ್ನಲಾಗಿದೆ. ರಾತ್ರಿ 1 ಘಂಟೆಯ ಹೊತ್ತಿಗೆ ಈ ಘಟನೆ ನಡೆದಿದ್ದು, ಆರೋಪಿ ಶಹರ ಠಾಣೆಗೆ ಬಂದು ಶರಣಾಗಿದ್ದಾನೆ ಎನ್ನಲಾಗಿದೆ.
Author: Karnataka Files
Post Views: 1





