ಲೋಕಸಭಾ ಸಾವ೯ತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಕೊಂಡಿಕೊಪ್ಪ ಚೆಕ್ ಪೊಸ್ಟ್ ನಲ್ಲಿ ವಾಹನ ತಪಾಸಣೆ ವೇಳೆ, ವಾಣಿಜ್ಯ ತೆರಿ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಸೀರೆಗಳ ಸಾಗಾಟ ಪತ್ತೆ ಹಚ್ಚಿದ್ದಾರೆ.
ವಾಣಿಜ್ಯ ತೆರಿಗೆ ( ಜಾರಿ ) ವಿಭಾಗದ ಅಧಿಕಾರಿಗಳು ಚೆಕ್ ಪೋಸ್ಟ್ ಬಳಿ ದೋಸ್ತಿ ವಾಹನ ಬರುತ್ತಿದ್ದಂತೆ ತಪಾಸಣೆ ಮಾಡಿದಾಗ ಆಕ್ರಮ ಸೀರೆ ಸಾಗಾಟ ಪತ್ತೆಯಾಗಿದೆ. 1536 ರೇಶ್ಮೆ ಸೀರೆಗಳು ಮತ್ತು ವಿವಿಧ ರೀತಿಯ ಸೀರೆಗಳು ವಶಕ್ಕೆ ಪಡೆಯಲಾಗಿದೆ. ಇವು ಒಟ್ಟು 15,36,000 ಮೌಲ್ಯದ್ದು ಅಂತ ಅಂದಾಜಿಸಲಾಗಿದೆ,
ಹುಬ್ಬಳ್ಳಿಯ ವಾಣಿಜ್ಯ ತೆರಿಗೆ ಜಾರಿ ವಿಭಾಗದ ಜಂಟಿ ಆಯುಕ್ತರಾದ ರವಿಕುಮಾರ ಮಾಗ೯ದಶ೯ನದಲ್ಲಿ , ವಾಣಿಜ್ಯ ತೆರಿಗೆ ಅಧಿಕಾರಿ ಗುರುಬಸಯ್ಯ ಹೊಸಮನಿ, ವಾಣಿಜ್ಯ ತೆರಿಗೆ ಇನ್ಸಪೇಕ್ಟರ್ ಅಮರೇಶ್ ರಾಠೋಡ ಕಾಯ೯ಚರಣೆ ನಡೆಸಿ ವಶಕ್ಕೆ ಪಡೆದು, ಚುನಾವಣಾಧಿಕಾರಿಗಳ ವಶಕ್ಕೆ ನೀಡಿದ್ದಾರೆ.
Author: Karnataka Files
Post Views: 1





