ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಇಂದು ಸಹ ಬೆಳ್ಳಂ ಬೆಳಿಗ್ಗೆ ಅಖಾಡಾಕ್ಕೆ ಧುಮುಕಿದರು. ಬೆಳಿಗ್ಗೆ 5-30 ಕ್ಕೆ ಮನೆಯಿಂದ ಹೊರ ಬಿದ್ದ ಜಗದೀಶ ಶೆಟ್ಟರ ವಾಯುವಿಹಾರಿಗಳ ಜೊತೆ ಕೆಲ ಕಾಲ ಕಳೆದರು. ಬೆಳಗಾವಿ ಅಭಿವೃದ್ಧಿ ಬಗ್ಗೆ ಸಮಾಲೋಚನೆ ನಡೆಸಿದರು.
ಲೋಕಸಭಾ ಚುನಾವಣೆಯ ಅಂಗವಾಗಿ ಇಂದು ಬೆಳಗಾವಿಯ ರೇಸ್ ಕೋರ್ಸ್ ವಾಕಿಂಗ್ ಟ್ರ್ಯಾಕ್, ಹನುಮಾನ ನಗರ ಸರ್ಕಲ್ ಹಾಗೂ ಹಿಂಡಲಗಾ ಕಾರಾಗೃಹ ಬಳಿಯ ಶ್ರೀ ಗಣಮತಿ ಮಂದಿರದ ಹತ್ತಿರ ಚಾಯ್ ಪೇ ಚರ್ಚಾ ಮೂಲಕ ಸಾರ್ವಜನಿಕರನ್ನು ಭೇಟಿ ಮತಯಾಚನೆ ಮಾಡಿದರು.
ಶೆಟ್ಟರ ಜೊತೆಗೆ ಪಕ್ಷದ ಮುಖಂಡರು, ಹಿರಿಯರು ಹಾಗೂ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು.
Author: Karnataka Files
Post Views: 2





