ಕರ್ನಾಟಕ ಪ್ರವಾಸೋಧ್ಯಮ ಇಲಾಖೆ ಕರ್ನಾಟಕದ ಪ್ರಸಿದ್ಧ ತಾಣಗಳನ್ನು ವಿಶ್ವಮಟ್ಟದಲ್ಲಿ ಪರಿಚಯಿಸಲು ಮುಂದಾಗಿದೆ. ಪ್ರವಾಸೋದ್ಯಮ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿರುವ ಸಚಿವ ಎಚ್ ಕೆ ಪಾಟೀಲ ಕೆಲ ಐತಿಹಾಸಿಕ ಯೋಜನೆಗಳನ್ನು ಹಾಕಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸ ಪ್ರವಾಸೋದ್ಯಮ ನೀತಿಯನ್ನು ಹೊರತರಲಿದೆ. ಈ ನೀತಿಯು ಎಲ್ಲಾ ಪ್ರವಾಸಿ ತಾಣಗಳಲ್ಲಿ ಮೂಲಭೂತ ಮೂಲಸೌಕರ್ಯಗಳನ್ನು ಖಾತರಿಪಡಿಸುವ ಗುರಿಯನ್ನು ಹೊಂದಿದೆ. ಸ್ಮಾರಕಗಳ ದತ್ತು ಯೋಜನೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವವನ್ನು ಉತ್ತೇಜಿಸುತ್ತದೆ.
ಉತ್ತರ ಕರ್ನಾಟಕದ ಯಾತ್ರಾ ಸ್ಥಳ ಯಲ್ಲಮ್ಮನಗುಡ್ಡದಲ್ಲಿ ರೋಪ್ ವೇ ನಿರ್ಮಾಣಕ್ಕೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಯೋಚಿಸುತ್ತಿದೆ ಎಂದು ತಿಳಿದು ಬಂದಿದೆ. ಒಂದು ವೇಳೆ ಯಲ್ಲಮ್ಮನಗುಡ್ಡದಲ್ಲಿ ರೋಪ್ ವೇ ನಿರ್ಮಾಣವಾದಲ್ಲಿ ಮತ್ತಷ್ಟು ಭಕ್ತರನ್ನು ಆಕರ್ಷಸುತ್ತದೆ. ಪ್ರತಿ ವರ್ಷ ಯಲ್ಲಮ್ಮನಗುಡ್ಡಕ್ಕೆ 20 ಲಕ್ಷ ಜನ ಭಕ್ತರು ದೇವಿಯ ದರ್ಶನ ಪಡೆಯಲು ಬರುತ್ತಾರೆ.
Author: Karnataka Files
Post Views: 4





