ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾದ ಶ್ರೀಮತಿ ವೀಣಾ ಕಾಶಪ್ಪನವರ್, ಪಕ್ಷದ ನಾಯಕರಾದ ವಿಜಯಾನಂದ ಕಾಶಪ್ಪನವರ್ ಹಾಗೂ ಅವರ ಬೆಂಬಲಿಗರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದೀರ್ಘ ಚರ್ಚೆ ನಡೆಸಿದರು. ಬಾಗಲಕೋಟ ಕ್ಷೇತ್ರಕ್ಕೆ ಸಂಯುಕ್ತ ಪಾಟೀಲ ಅಭ್ಯರ್ಥಿ ಘೋಷಣೆಯಾಗುತ್ತಿದ್ದಂತೆ ಆಕ್ರೋಶ ಹೊರಹಾಕಿದ್ದ ವೀಣಾ ಹಾಗೂ ವಿಜಯಾನಂದ ಕಾಶಪ್ಪನವರ, ಅನ್ಯಾಯ ಸರಿಪಡಿಸುವಂತೆ ಕಾಂಗ್ರೇಸ್ ಹೈಕಮಾಂಡಗೆ ಗಡುವು ನೀಡಿದ್ದರು.
ಟಿಕೇಟ ಕೈ ತಪ್ಪುತ್ತಿದ್ದಂತೆ ಬೆಂಬಲಿಗರ ಸಭೆ ಕರೆದಿದ್ದ ವೀಣಾ ಕಾಶಪ್ಪನವರ, ಬೆಂಬಲಿಗರ ಅಭಿಪ್ರಾಯದಂತೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವದಾಗಿ ಎಚ್ಚರಿಕೆ ನೀಡಿದ್ದರು. ವೀಣಾ ಹಾಗೂ ವಿಜಯಾನಂದ ಕಾಶಪ್ಪನವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಹು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಚರ್ಚೆ ನಡೆಸಿದರು.
ಸುಧೀರ್ಘ ಚರ್ಚೆ ನಡೆಸಿದ ನಂತರ ವೀಣಾ ಕಾಶಪ್ಪನವರನ್ನು ಸಮಾಧಾನ ಪಡಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಯಶಸ್ವಿಯಾದರು. ವೀಣಾ ಕಾಶಪ್ಪನವರಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ ಲೋಕಸಭಾ ಚುನಾವಣೆ ನಂತರ ರಾಜ್ಯ ಮಹಿಳಾ ಕಾಂಗ್ರೇಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುವದು ಎಂದು ಭರವಸೆ ನೀಡಿದರು. ಇದಕ್ಕೆ ಒಪ್ಪಿದ ವೀಣಾ, ಕಾಂಗ್ರೇಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಪರ ಪ್ರಚಾರದಲ್ಲಿ ತೊಡಗುವದಾಗಿ ಹೇಳಿದರು ಎನ್ನಲಾಗಿದೆ.





