ಧಾರವಾಡದ ಐನಾಕ್ಸ್ ಥೇಟರ ಬಳಿ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದಿದೆ. ಕ್ಷುಲ್ಲಕ ಕಾರಣಕ್ಕಾಗಿ ಮನಿಕಿಲ್ಲಾ ಹಾಗೂ ಜನ್ನತ ನಗರದ ಹುಡುಗರ ಮಧ್ಯೆ ಹೊಡೆದಾಟ ನಡೆದಿದ್ದು, ಮುಲ್ಲಾ ಎಂಬ ಯುವಕನಿಗೆ ಗಂಭೀರ ಗಾಯವಾಗಿದೆ.
ನಿವೃತ್ತರ ಸ್ವರ್ಗ ಎಂದು ಹೆಸರಾದ ಧಾರವಾಡದಲ್ಲಿ ಪುಡಿ ರೌಡಿಗಳ ಹಾವಳಿ ಮೀತಿ ಮೀರಿದ್ದು, ಅವಳಿ ನಗರದ ಪೊಲೀಸರು ಬಾಲ ಬಿಚ್ಚುತ್ತಿರುವ ಪುಡಿ ರೌಡಿಗಳಿಗೆ ಬೆಂಡೆತ್ತ ಬೇಕಾಗಿದೆ. ರೌಡಿಗಳ ಬೆನ್ನಿಗೆ ನಿಲ್ಲುವ, ಅವರನ್ನು ಬಿಡಿಸಿಕೊಳ್ಳುವ ರಾಜಕೀಯ ನಾಯಕರ ಮೇಲೆಯೂ ಕಟ್ಟು ನಿಟ್ಟಿನ ಕ್ರಮ ಕೈಗೊಂಡಲ್ಲಿ ಧಾರವಾಡ ನೆಮ್ಮದಿಯಾಗಿರೋಕೆ ಸಾಧ್ಯ ಎಂಬುದು ಜನಸಾಮಾನ್ಯರ ಕೂಗಾಗಿದೆ.
Author: Karnataka Files
Post Views: 1





