Download Our App

Follow us

Home » ರಾಜಕೀಯ » ಕರ್ನಾಟಕ ಪ್ರದೇಶ ಕಾಂಗ್ರೇಸ್ ಕಮಿಟಿಯಲ್ಲಿ ಧಾರವಾಡ ಜಿಲ್ಲೆಯ ಲಿಂಗಾಯತ ನಾಯಕರಿಗೆ ಮಣೆ ಹಾಕಿದ ಕಾಂಗ್ರೇಸ್

ಕರ್ನಾಟಕ ಪ್ರದೇಶ ಕಾಂಗ್ರೇಸ್ ಕಮಿಟಿಯಲ್ಲಿ ಧಾರವಾಡ ಜಿಲ್ಲೆಯ ಲಿಂಗಾಯತ ನಾಯಕರಿಗೆ ಮಣೆ ಹಾಕಿದ ಕಾಂಗ್ರೇಸ್

ಒಂದೆಡೆ ಲಿಂಗಾಯತರನ್ನು ರಾಜಕೀಯವಾಗಿ ತುಳಿಯಲಾಗುತ್ತಿದೆ ಎಂದು ವೀರಶೈವ ಮಠಾಧೀಶರು ಸಾಮೂಹಿಕವಾಗಿ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಬಹಿರಂಗ ಸಮರ ಸಾರಿರುವಾಗ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಧಾರವಾಡ ಜಿಲ್ಲೆಯ ಲಿಂಗಾಯತ ಯುವ ಮುಖಂಡರುಗಳಿಗೆ ರಾಜ್ಯ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಕ‌ ಮಾಡಿ ಆದೇಶ ಹೊರಡಿಸಿದ್ದಾರೆ.

 

ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ ನೇಮಕಾತಿ ಆದೇಶ ಹೊರಡಿಸಿದ್ದು, ರಾಜ್ಯ ಕಾಂಗ್ರೇಸ್ ಉಪಾಧ್ಯಕ್ಷರನ್ನಾಗಿ ಮೋಹನ ಲಿಂಬಿಕಾಯಿ, ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿಯಾಗಿ ಮೋಹನ ಅಸುಂಡಿ, ಇಸ್ಮಾಯಿಲ್ ತಮಟಗಾರ, ನಾಗರಾಜ ಗೌರಿ, ರಜತ್ ಉಳ್ಳಾಗಡ್ಡಿಮಠ, ಸ್ವಾತಿ ಮಳಗಿ, ಅಲ್ತಾಫ್ ನವಾಜ್ ಕಿತ್ತೂರ, ಮಲ್ಲಿಕಾರ್ಜುನ ಅಕ್ಕಿ, ಪಾರಸಮಲ ಜೈನ, ಸತೀಶ ಮೆಹರವಾಡೆ, ಸದಾನಂದ ಡಂಗನವರ, ವಿಜಯ ಮತ್ತಿಕಟ್ಟಿ, ಕಿರಣ ಮೂಗಬಸವ, ಷಣ್ಮುಖ ಶಿವಳ್ಳಿಯವರನ್ನು ನೇಮಕ ಮಾಡಿ ಕೆ ಸಿ ವೇಣುಗೋಪಾಲ ಆದೇಶ ಹೊರಡಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಸರ್ವತೋಮುಖ ಅಭಿವೃದ್ಧಿಗೆ ಹೊಸ ಭಾಷ್ಯ – ಶಾಸಕ ವಿನಯ ಕುಲಕರ್ಣಿ ಶ್ಲಾಘನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ 2026-27ನೇ ಸಾಲಿನ ರಾಜ್ಯ ಬಜೆಟ್ ಅತ್ಯಂತ ಆಶಾದಾಯಕವಾಗಿದ್ದು, ಇದು ಕರ್ನಾಟಕದ ಆರ್ಥಿಕ ಶಕ್ತಿಯನ್ನು ಜಗತ್ತಿಗೆ ಸಾರುವಂತಿದೆ ಎಂದು ಧಾರವಾಡ ಶಾಸಕರು

Live Cricket

error: Content is protected !!