ಕೇಂದ್ರ ಸಚಿವ ಪ್ರಲ್ಲಾದ ಜೋಶಿ ವಿರುದ್ಧ ವಾಕ್ಸಮರ ಮುಂದುವರೆಸಿರುವ ಫಕೀರ ದಿಂಗಾಲೇಶ್ವರ ಸ್ವಾಮಿಗಳ ಇಂದಿನ ಸಭೆ ಗಮನ ಸೆಳೆದಿದೆ. ಧಾರವಾಡದ ಸಾಧನಕೆರೆ ರಸ್ತೆಯಲ್ಲಿರುವ ಸೇವಾಲಯದಲ್ಲಿ ಸಭೆ ಆರಂಭಗೊಂಡಿದೆ
ಜೋಶಿ ವಿರುದ್ದ ಸ್ಪರ್ಧೆ ಮಾಡುವಂತೆ ಭಕ್ತರು ಒತ್ತಡ ಹೇರುತ್ತಿದ್ದಾರೆ. ಶಿರಹಟ್ಟಿ ಮಠ, ಜಾತ್ಯತೀತ ಮಠವಾಗಿರುವದರಿಂದ, ಮಠಕ್ಕೆ ದೊಡ್ಡ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಹಾಗಾಗಿ ಜೋಶಿ ವಿರುದ್ದ ಸ್ಪರ್ಧೆ ಮಾಡುವಂತೆ ಶ್ರೀಗಳನ್ನು ಇವತ್ತಿನ ಸಭೆಯಲ್ಲಿ ಒತ್ತಾಯ ಮಾಡುತ್ತೇವೆಂದು ಪಂಚಮಸಾಲಿ ಸಮಾಜದ ರಾಜ್ಯ ಉಪಾಧ್ಯಕ್ಷ ಬಸವರಾಜ ಕರ್ನಾಟಕ ಫೈಲ್ಸ್ ಗೆ ತಿಳಿಸಿದ್ದಾರೆ.
Author: Karnataka Files
Post Views: 2





