Download Our App

Follow us

Home » ರಾಜಕೀಯ » ನಾಳೆ ಧಾರವಾಡದಲ್ಲಿ ಲಿಂಗಾಯತ ಪ್ರಮುಖರ ಹೈ ವೋಲ್ಟೇಜ್ ಸಭೆ

ನಾಳೆ ಧಾರವಾಡದಲ್ಲಿ ಲಿಂಗಾಯತ ಪ್ರಮುಖರ ಹೈ ವೋಲ್ಟೇಜ್ ಸಭೆ

ಧಾರವಾಡ ಲೋಕಸಭಾ ಕ್ಷೇತ್ರ, ರಾಜ್ಯದ ಗಮನ ಸೆಳೆಯುತ್ತಿದೆ. ಬ್ರಾಹ್ಮಣ ವರ್ಸಸ್ ಲಿಂಗಾಯತ ಅನ್ನೋವಷ್ಟರ ಮಟ್ಟಿಗೆ ಈ ಚುನಾವಣೆ ಬಂದು ನಿಂತಿದೆ. ಪ್ರಮುಖ ಲಿಂಗಾಯತ ಮಠಾಧೀಶರು ಹಾಲಿ ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರ ವಿರುದ್ಧ ಗಂಭೀರ ಆರೋಪ ಮಾಡುತ್ತಿರುವ ಬೆನ್ನಲ್ಲೇ ನಾಳೆ ಧಾರವಾಡದಲ್ಲಿ ಲಿಂಗಾಯತ ಪ್ರಮುಖ ನಾಯಕರ ಸಭೆ ಕರೆಯಲಾಗಿದೆ. 

ಧಾರವಾಡದ ಮಯೂರ ರೆಸಾರ್ಟನಲ್ಲಿ ಧಾರವಾಡ ಲೋಕಸಭಾ ವ್ಯಾಪ್ತಿಯ ಲಿಂಗಾಯತ ಪ್ರಮುಖರ ಸಭೆ ನಡೆಯಲಿದ್ದು, ಕಾಂಗ್ರೇಸ್ಸಿನ ಲಿಂಗಾಯತ ನಾಯಕರು ಭಾಗವಹಿಸಲಿದ್ದಾರೆ. ಮಾಜಿ ಸಚಿವ ಪಿ ಸಿ ಸಿದ್ದನಗೌಡರ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ವಿನಯ ಕುಲಕರ್ಣಿಯವರ ಧರ್ಮಪತ್ನಿ ಶಿವಲೀಲಾ ಕುಲಕರ್ಣಿ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. 

ಸಚಿವ ಸಂತೋಷ ಲಾಡ್, ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 10-30 ಕ್ಕೆ ಸಭೆ ಕರೆಯಲಾಗಿದ್ದು, ಫಕೀರ ದಿಂಗಾಲೇಶ್ವರ ಸ್ವಾಮೀಜಿ ತೆಗೆದುಕೊಂಡ ನಿರ್ಣಯದ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಲಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!