ನಾಳೆ ಧಾರವಾಡದ ನವಲೂರನಲ್ಲಿರುವ ಮಯೂರ್ ರೆಸಾರ್ಟನಲ್ಲಿ ರೈತ ಸೇನಾ ಕರ್ನಾಟಕದ ಅಧ್ಯಕ್ಷ ವಿರೇಶ ಸೊಬರದಮಠ ನೇತ್ರತ್ವದಲ್ಲಿ ಸಭೆ ನಡೆಯಲಿದೆ.
ಮಧ್ಯಾಹ್ನ 12 ಘಂಟೆಗೆ ರೈತ ಸಂಘಟನೆಗಳ ಸಭೆ ನಡೆಯಲಿದ್ದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗುವದೆಂದು ವಿರೇಶ ಸೊಬರದಮಠ ತಿಳಿಸಿದ್ದಾರೆ.
ಕಳಸಾ ಬಂಡೋರಿ ಹಾಗೂ ಮಹಾದಾಯಿ ಯೋಜನೆ ಕುರಿತು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ನಿರ್ಲಕ್ಷ ತಾಳಿದ್ದಾರೆಂದು ಈಗಾಗಲೇ ಆರೋಪಿಸಿರುವ ಸೊಬರದಮಠ ನಾಳೆ ನಡೆಯುವ ಸಭೆಯಲ್ಲಿ ಚುನಾವಣೆ ಸಂಬಂಧಿತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಈ ಸಭೆಯಲ್ಲಿ ನಾಲ್ಕು ಜಿಲ್ಲೆಗಳ 11 ತಾಲೂಕಿನ ರೈತರು ಭಾಗವಹಿಸಲಿದ್ದು, 2 ಸಾವಿರ ರೈತರು ಒಮ್ಮತದ ನಿರ್ಧಾರ ಮಾಡಲಿದ್ದಾರೆ.
Author: Karnataka Files
Post Views: 1





