ಫಕೀರ ದಿಂಗಾಲೇಶ್ವರ ಶ್ರೀಗಳು ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಅಂದಿದ್ದೆ ತಡ. ಧಾರವಾಡ ಜಿಲ್ಲೆಯ ರಾಜಕಾರಣ ಗರಿಗೆದರಿ ನಿಂತಿದೆ.
ಬಿಜೆಪಿ ಅಭ್ಯರ್ಥಿ ಪ್ರಲ್ಲಾದ ಜೋಶಿ ವಿರುದ್ಧ ಗಂಭೀರ ಆರೋಪ ಮಾಡಿರುವ ದಿಂಗಾಲೇಶ್ವರ ಶ್ರೀಗಳಿಗೆ ಪ್ರಲ್ಲಾಡ ಜೋಶಿ ಬ್ರಿಗೇಡ್ ಸ್ಪಷ್ಟಿಕರಣ ನೀಡಿದೆ. ಶ್ರೀಗಳು ಆರೋಪಿಸಿರುವ ಎಲ್ಲ ಆರೋಪಗಳಿಗೆ ಉತ್ತರ ಕೊಟ್ಟಿರುವ ಪ್ರಲ್ಲಾದ ಜೋಶಿ ಬ್ರಿಗೇಡ್, ರಾಜಕೀಯದಿಂದ ದೂರವಿರುವಂತೆ ಮತ್ತು ಹಿಂದು ಧರ್ಮ ಒಡೆಯದಂತೆ ಮನವಿ ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮನವಿ ಮಾಡಿರುವ ಪ್ರಲ್ಲಾದ ಜೋಶಿ ಬ್ರಿಗೇಡ್, ಜೋಶಿಯವರು ಮಾಡಿರುವ ಕೆಲಸಗಳನ್ನು ಪಟ್ಟಿ ಮಾಡಿ, ಸ್ಪಷ್ಟಿಕರಣ ಕೊಟ್ಟಿದ್ದಾರೆ.
Author: Karnataka Files
Post Views: 2





