Download Our App

Follow us

Home » ರಾಜಕೀಯ » ಬರ್ಕೊ, ಈ ಸಲಾ ಗ್ಯಾರಂಟಿ ಅದ ಬರತೈತಿ…. ಇದು ಕಟ್ಟಿ ಮ್ಯಾಲಿನ್ ಲೆಕ್ಕಾ. ಜೂನ್ 4 ಕ್ಕ ಆಕ್ಕೆತಿ ಪಕ್ಕಾ.

ಬರ್ಕೊ, ಈ ಸಲಾ ಗ್ಯಾರಂಟಿ ಅದ ಬರತೈತಿ…. ಇದು ಕಟ್ಟಿ ಮ್ಯಾಲಿನ್ ಲೆಕ್ಕಾ. ಜೂನ್ 4 ಕ್ಕ ಆಕ್ಕೆತಿ ಪಕ್ಕಾ.

ಧಾರವಾಡ ಲೋಕಸಭಾ ಕ್ಷೇತ್ರ, ಹಿಂದೆಂದಿಗಿಂತ ಈ ಸಲ ಜೋರು ಸದ್ದು ಮಾಡಿತ್ತು. ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು, ಹಳ್ಳಿ ಹಳ್ಳಿಗಳ ದರ್ಶನ ಪಡೆದಿದ್ರು. 

ಬಿಸಿಲಿನ ಧಗೆಯಲ್ಲೂ ಬೆವರಿಳಿಸಿಕೊಂಡು ಪ್ರಚಾರ ಕಾರ್ಯದಲ್ಲಿ ಧುಮುಕಿದ್ದರು. ಇದೇ ಮೊದಲ ಬಾರಿಗೆ, ಜನರನ್ನು ಹತ್ತಿರದಿಂದ ಮಾತಾಡಿಸಿಕೊಂಡು ಬರುವಷ್ಟು ಬಿರುಸಿನಿಂದ ಕೂಡಿದ್ದ ಚುನಾವಣೆ ಗಮನ ಸೆಳೆದಿತ್ತು.

ಮತದಾನ ಮುಗಿದು 48 ಘಂಟೆ ಮುಗಿದಿದೆ. ಎಲ್ಲೆಲ್ಲಿ ಎಷ್ಟೇಷ್ಟು ಮತದಾನ ಆಗಿದೆ, ಯಾರಿಗೆ ಎಷ್ಟು ಮತ ಬೀಳುತ್ತವೆ ಅನ್ನೋ ಲೆಕ್ಕ ನಡೆದಿದೆ. ” ಆ ಊರಲ್ಲಿ ಆ ಪಾರ್ಟಿ ಜೋರ್ ಐತಂತ ” ” ಈ ಕಡೆ ಆ ಪಾರ್ಟಿ ಜೋರ್ ಐತಂತ, ಗ್ಯಾರಂಟಿ ಹೊಡೆತ ಆಕ್ಕೆತಿ ನೋಡ್ತೀರ ಈ ಸಲ” ಎಂದು ಮಾತನಾಡಿಕೊಂಡು ಜನ ಕಟ್ಟೆ ಮೇಲೆ ಹರಟೆ ಹೊಡೆಯುತ್ತ ಲೆಕ್ಕ ಹಾಕುತ್ತಿದ್ದಾರೆ. 

ಮತದಾನ ಪ್ರಕ್ರಿಯೆ ಮುಗಿದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದ್ದು, ಜೂನ್ 4 ರಂದು ಹಣೆಬರಹ ಗೊತ್ತಾಗಲಿದೆ. 

ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು, ಓಡಾಡಿದ್ದ ಬಿಜೆಪಿ ಅಭ್ಯರ್ಥಿ ಪ್ರಲ್ಲಾದ ಜೋಶಿ, ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿ, ಕುಟುಂಬದವರೊಂದಿಗೆ ಕಾಲ ಕಳೆಯುತ್ತಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!