ರಾಹುಲ್ ಗಾಂಧಿ ಇಂದು ಹರಿಯಾಣಾದಲ್ಲಿ ಗೂಡ್ಸ್ ಟೆಂಪೋದಲ್ಲಿ ಪ್ರಯಾಣ ಬೆಳೆಸಿ, ಅಲ್ಲಿನ ಯುವಕರ ಸಮಸ್ಯೆ ಆಲಿಸಿದರು. ಅವರೊಂದಿಗೆ ಅಗ್ನಿವೀರ ಮತ್ತು ಉದ್ಯೋಗಗಳ ಬಗ್ಗೆ ಚರ್ಚೆ ನಡೆಸಿದ್ರು.
ಪ್ರಧಾನಿ ಮೋದಿ, ಅದಾನಿ ಟೆಂಪೋ ಹತ್ತಿದರೆ, ನನ್ನ ಟೆಂಪೋ ಯುವಕರ ಸಮಸ್ಯೆ ಪರಿಹಾರಕ್ಕೆ ಓಡುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಹರಿಯಾಣಾದಲ್ಲಿ ನಿರುದ್ಯೋಗ ಸಮಸ್ಯೆ ಎದುರಾಗಿದ್ದು, ಯಾವದೇ ಸರ್ಕಾರಿ ಹುದ್ದೆಗಳ ಭರ್ತಿ ಇಲ್ಲದೆ ವಿಧ್ಯಾವಂತ ಯುವಕರ ಭವಿಷ್ಯ ಮಂಕಾಗಿದೆ. ಕಾಂಗ್ರೇಸ್ ಪ್ರಣಾಳಿಕೆಯಲ್ಲಿ 30 ಲಕ್ಷ ಸರ್ಕಾರಿ ಹುದ್ದೆ ತುಂಬುವ ಭರವಸೆ ಕೊಟ್ಟಿದ್ದು, ಅಗ್ನಿವೀರ ಯೋಜನೆ ಕಿತ್ತೋಗೆಯುವದಾಗಿ ರಾಹುಲ್ ಗಾಂಧಿ ಮಾತು ಕೊಟ್ಟಿದ್ದಾರೆ.
Author: Karnataka Files
Post Views: 1





