ಬೆಂಗಳೂರಿನಲ್ಲಿ ಈಚೆಗೆ ನಡೆದ ಮದುವೆ ಸಮಾರಂಭದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ವಿಡಿಯೋಗ್ರಾಫರ್ ಮೇಲೆ ಹಲ್ಲೆ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಧಾರವಾಡ ಫೋಟೋ ಮತ್ತು ವಿಡಿಯೋಗ್ರಾಫರ್ಸ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಧಾರವಾಡ ಫೋಟೋ ಮತ್ತು ವಿಡಿಯೋಗ್ರಾಫರ್ಸ ಸಂಘದ ಅಧ್ಯಕ್ಷರಾದ ರಾಹುಲ್ ದತ್ತಪ್ರಸಾದ, ಕಾರ್ಯಾಧ್ಯಕ್ಷ ರವಿ ಯಾಲಕ್ಕಿಶೆಟ್ಟರ್, ಉಪಾಧ್ಯಕ್ಷ ಲಕ್ಷ್ಮಣ ದಾನಪ್ಪಗೌಡರ್, ಕಾರ್ಯದರ್ಶಿ ಬೂಸ್ಕೋ ಸೊಲೋಮನ್, ಸಹ ಕಾರ್ಯದರ್ಶಿ ಉಮೇಶ್ ಚಿಕ್ಕೋಡಿ. ಖಜಾಂಚಿ ಮೋಹನ್ ಕರಾಟೆ ಮತ್ತು ಸದಸ್ಯರಾದ, ಮುರಳಿ ಮಲಜಿ, ಶ್ರೀನಿವಾಸ ಮಲಜಿ, ನಂದಿಕೇಶ್ವರ ಹೆಗಡೆ, ಅಮೃತ ಕಾಟಿಗಾರ, ಸೇರಿದಂತೆ ಹಲವಾರು ಸದಸ್ಯರು ಉಪಸ್ಥಿತರಿದ್ದರು.
Author: Karnataka Files
Post Views: 1





