Download Our App

Follow us

Home » ರಾಜಕೀಯ » ಹುಬ್ಬಳ್ಳಿ ಧಾರವಾಡ ಪಾಲಿಕೆಯಲ್ಲಿಯೂ ಮುಸ್ಲಿಮ್ ಸದಸ್ಯರಿಗೆ ಇಲ್ಲಾ ವಿರೋದ ಪಕ್ಷದ ಸ್ಥಾನ. ಮುಸ್ಲಿಮ್ಸ್ ಸಿರ್ಫ್ ವೋಟ್ ಕೆ ಲಿಯೇ..

ಹುಬ್ಬಳ್ಳಿ ಧಾರವಾಡ ಪಾಲಿಕೆಯಲ್ಲಿಯೂ ಮುಸ್ಲಿಮ್ ಸದಸ್ಯರಿಗೆ ಇಲ್ಲಾ ವಿರೋದ ಪಕ್ಷದ ಸ್ಥಾನ. ಮುಸ್ಲಿಮ್ಸ್ ಸಿರ್ಫ್ ವೋಟ್ ಕೆ ಲಿಯೇ..

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಈಗಾಗಲೇ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ನಡೆದಿದೆ. ಆದ್ರೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೇಸ್ ವಿರೋಧ ಪಕ್ಷದ ಸ್ಥಾನಕ್ಕೆ ಆಯ್ಕೆ ಮಾಡಬೇಕಿದ್ದು, ಪಾಲಿಕೆಗೆ ಆಯ್ಕೆಯಾಗಿ ಬಂದ 14 ಜನ ಮುಸ್ಲಿಮ್ ಪಾಲಿಕೆ ಸದಸ್ಯರಿಗೆ ಅನ್ಯಾಯ ಮಾಡಲಾಗುತ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ.

ವಿಧಾನ ಪರಿಷತ್ ಸ್ಥಾನ ಈಗಾಗಲೇ ತಪ್ಪಿ ಹೋಗಿದ್ದು, ಪಾಲಿಕೆಯ ವಿಪಕ್ಷ ಸ್ಥಾನವನ್ನು ಸಹ ತಪ್ಪಿಸಲಾಗುತ್ತಿದೆ. ಕಾಂಗ್ರೇಸ್ಸಿಗೆ ಕೇವಲ ಮುಸ್ಲಿಮ್ ಮತಗಳು ಬೇಕು, ಆದ್ರೆ ಅಧಿಕಾರ ಬೇಡವಾ ಎಂದು ಮುಸ್ಲಿಮ್ ಸಮಾಜದಲ್ಲಿ ಚರ್ಚೆ ಆರಂಭವಾಗಿದೆ. 

ಪಾಲಿಕೆಯಲ್ಲಿ ಆಡಳಿತ ಪಕ್ಷವನ್ನು ಸಮರ್ಥವಾಗಿ ಕಟ್ಟಿ ಹಾಕಲು ಇಮ್ರಾನ್ ಯಲಿಗಾರ, ಆರೀಫ್ ಭದ್ರಾಪುರ ಅಂತಹ ಮೊದಲ ಬಾರಿ ಆಯ್ಕೆಯಾದ, ಅನುಭವಿ ಸದಸ್ಯರಿದ್ದರು, ಕಾಂಗ್ರೇಸ್ ನಾಯಕರು ಮನಸ್ಸು ಮಾಡುತ್ತಿಲ್ಲ ಎನ್ನಲಾಗಿದೆ 

ಪಾಲಿಕೆಯಲ್ಲಿ ಪಕ್ಷಗಳ ಬಲಾಬಲ

ಬಿಜೆಪಿಯ 39, ಕಾಂಗ್ರೇಸ್ಸಿನ 33 ಎಐಎಂಐಎಂನ 3, ಜೆಡಿಎಸ್ಸಿನ 1 ಮತ್ತು ಪಕ್ಷೇತರ 6 ಜನ ಪಾಲಿಕೆ ಸದಸ್ಯರಿದ್ದಾರೆ. ಕಾಂಗ್ರೇಸ್ಸಿನ 33 ಪಾಲಿಕೆ ಸದಸ್ಯರ ಪೈಕಿ 14 ಜನ ಮುಸ್ಲಿಮ್ ಸದಸ್ಯರು ಆಯ್ಕೆಯಾಗಿದ್ದಾರೆ.

ಇನ್ನುಳಿದ ಕಾಂಗ್ರೇಸ್ಸಿನ ಸದಸ್ಯರು ಶೇಕಡಾ 50 ರಷ್ಟಿರುವ ಮುಸ್ಲಿಮ್ ಮತದಾರರನ್ನು ಹೊಂದಿರುವ ವಾರ್ಡಗಳಿಂದ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಕಾಂಗ್ರೇಸ್ ಪಕ್ಷಕ್ಕೆ ಇಷ್ಟೆಲ್ಲಾ ಶಕ್ತಿ ತುಂಬಿದ ಸಮಾಜಕ್ಕೆ ಅಧಿಕಾರದಿಂದ ದೂರ ಇಡುವ ಷಡ್ಯಂತ್ರ ನಡೆದಿದೆ ಅನ್ನೋದರ ಬಗ್ಗೆ ಚರ್ಚೆ ನಡೆದಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!